Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 7:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಉನ್ನತವಾದ ಮಂದಿರದ ಈ ಮಾರ್ಗವಾಗಿ ಹೋಗುವವರು ಅದನ್ನು ನೋಡಿ ಬೆರಗಾಗಿ, ‘ಯೆಹೋವನು ಈ ದೇಶವನ್ನೂ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಉನ್ನತವಾದ ಈ ಮಂದಿರದ ಮಾರ್ಗವಾಗಿ ಹೋಗುವವರು ಇದನ್ನು ನೋಡಿ ವಿಸ್ಮಿತರಾಗಿ, ‘ಸರ್ವೇಶ್ವರ ಈ ನಾಡನ್ನೂ ಈ ಆಲಯವನ್ನೂ ಹೀಗೇಕೆ ಮಾಡಿಬಿಟ್ಟರು?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಉನ್ನತವಾದ ಈ ಮಂದಿರದ ಮಾರ್ಗವಾಗಿ ಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ - ಯೆಹೋವನು ಈ ದೇಶವನ್ನೂ ಆಲಯವನ್ನೂ ಹೀಗೇಕೆ ಮಾಡಿದನು ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಅತ್ಯಂತ ಪ್ರಸಿದ್ಧಿಹೊಂದಿದ ಈ ದೇವಾಲಯವನ್ನು ನೋಡುವ ಪ್ರತಿಯೊಬ್ಬನು, ‘ದೇವರು ಈ ದೇಶಕ್ಕೆ ಮತ್ತು ಈ ಆಲಯಕ್ಕೆ ಹೀಗೇಕೆ ಮಾಡಿದನು?’ ಎಂದು ಅಚ್ಚರಿಪಡುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು, ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 7:21
12 ತಿಳಿವುಗಳ ಹೋಲಿಕೆ  

ನಾನು ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವುದು; ಬಾಬೆಲನ್ನು ಹಾದು ಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಪರಿಹಾಸ್ಯ ಮಾಡುವರು.


ಎದೋಮು ಪರಿಹಾಸ್ಯಕ್ಕೆ ಗುರಿಯಾಗುವುದು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳಿಗೆ ಬೆರಗಾಗಿ ಸಿಳ್ಳುಹಾಕುವರು.


ಕೊನ್ಯನೆಂಬ ಈ ಮನುಷ್ಯನು ಬಿಸಾಡಿದ ಒಡಕು ಕುಡಿಕೆಯೋ? ಯಾರಿಗೂ ಇಷ್ಟವಿಲ್ಲದ ಮಣ್ಣಿನ ಮಡಿಕೆಯೋ? ಎಂಬಂತೆ, ಅವನೂ ಅವನ ಸಂತತಿಯವರೂ ಏಕೆ ಬಿಸಾಡಲ್ಪಟ್ಟಿದ್ದಾರೆ? ನೋಡದ ದೇಶಕ್ಕೆ ಏಕೆ ಎಸೆಯಲ್ಪಟ್ಟಿದ್ದಾರೆ?


“ಇವು ನನಗೆ ಏಕೆ ಸಂಭವಿಸಿದವು” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ಉಡುಗೆಯು ಕೀಳಲ್ಪಟ್ಟು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದುದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.


“ನಮ್ಮ ದೇವರಾದ ಯೆಹೋವನು ಇವುಗಳನ್ನೆಲ್ಲಾ ನಮಗೆ ಏಕೆ ಮಾಡಿದ್ದಾನೆ?” ಎಂದು ನಿನ್ನ ಜನರು ಅನ್ನುವಾಗ ನೀನು ಅವರಿಗೆ, “ನೀವು ಯೆಹೋವನನ್ನು ತೊರೆದು, ಸ್ವದೇಶದಲ್ಲಿ ಅನ್ಯದೇವತೆಗಳನ್ನು ಆರಾಧಿಸಿದ ಹಾಗೆ ಪರದೇಶದಲ್ಲಿ ಅನ್ಯರನ್ನು ಆರಾಧಿಸುವಿರಿ” ಎಂದು ಹೇಳು.


ಆದುದರಿಂದ ಯೆಹೋವನು ಯೆಹೂದ ದೇಶದ ಮೇಲೆಯೂ ಯೆರೂಸಲೇಮಿನ ಮೇಲೆಯೂ, ಕೋಪವುಳ್ಳವನಾಗಿ ಅವುಗಳನ್ನು ಭಯಭೀತಿಗೂ ನಿಂದೆಗೂ, ಪರಿಹಾಸ್ಯಗಳಿಗೂ ಗುರಿಮಾಡಿದ್ದಾನೆ; ಇದಕ್ಕೆ ನೀವೇ ಸಾಕ್ಷಿಗಳು.


ನೀವು ಈ ಮಾತುಗಳನ್ನು ಕೇಳದಿದ್ದರೆ ಈ ಅರಮನೆಯು ಹಾಳುಬೀಳುವುದು ಎಂದು ನನ್ನ ಮೇಲೆ ಆಣೆಯಿಡುತ್ತೇನೆ ಇದು ಯೆಹೋವನ ನುಡಿ” ಎಂಬುದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು