Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 4:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದು ಹನ್ನೆರಡು ಎರಕದ ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ, ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಆ ಕಂಚಿನ ಕಡಲು ಪಾತ್ರೆ ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಭಾಗದಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಕಂಚಿನ ಕಡಲು ಅವುಗಳ ಬೆನ್ನಿನ ಮೇಲಿತ್ತು. ಅವುಗಳ ಹಿಂಭಾಗವು ಒಳಗಡೆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆ ಬೃಹದಾಕಾರದ ಪಾತ್ರೆಯನ್ನು ಹನ್ನೆರಡು ದೊಡ್ಡ ಎರಕದ ಹೋರಿಗಳ ಮೇಲೆ ಇಡಲಾಗಿತ್ತು. ಇವುಗಳಲ್ಲಿ ಮೂರು ಹೋರಿಗಳು ಪೂರ್ವದ ಕಡೆಗೂ ಮೂರು ಹೋರಿಗಳು ಪಶ್ಚಿಮದ ಕಡೆಗೂ ಮೂರು ಹೋರಿಗಳು ಉತ್ತರದ ಕಡೆಗೂ ಮೂರು ಹೋರಿಗಳು ದಕ್ಷಿಣದ ಕಡೆಗೂ ಮುಖಮಾಡಿ ನಿಂತಿದ್ದವು. ಎಲ್ಲಾ ಹೋರಿಗಳು ಒಂದಕ್ಕೊಂದಕ್ಕೆ ಮತ್ತು ಮಧ್ಯಭಾಗಕ್ಕೆ ಹಿಮ್ಮುಖವಾಗಿ ನಿಂತುಕೊಂಡಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 4:4
10 ತಿಳಿವುಗಳ ಹೋಲಿಕೆ  

ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಯಜ್ಞದ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.


ಅಪೊಸ್ತಲರೂ ಪ್ರವಾದಿಗಳೂ ಎಂಬ ಅಡಿಪಾಯದ ಮೇಲೆ ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು.


ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.


ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ.


ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು.


ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ ಮತ್ತು ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗವು ಒಳಗಡೆ ಇತ್ತು.


ಅದರ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು. ಅವು ಒಂದೊಂದು ಮೊಳಕ್ಕೆ ಹತ್ತರಂತೆ ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯಲ್ಪಟ್ಟಿದ್ದವು.


ಕಡಲಿನ ಪಾತ್ರೆಯು ನಾಲ್ಕು ಬೆರಳಿನಷ್ಟು ದಪ್ಪವಾಗಿತ್ತು. ಅದರ ಅಂಚುಪಾತ್ರೆಯ ಅಂಚಿನ ಹಾಗೆಯೂ ಅರಳಿದ ಕಮಲಪುಷ್ಪದ ಹಾಗೆ ಇತ್ತು. ಅದರೊಳಗೆ ಮೂರು ಸಾವಿರ ಕೊಳಗ ನೀರು ಹಿಡಿಯುತ್ತಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು