2 ಪೂರ್ವಕಾಲ ವೃತ್ತಾಂತ 35:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಅವನ ಸರದಾರರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಯಜ್ಞಪಶುಗಳನ್ನು ಸಂತೋಷವಾಗಿ ಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವವರು ಯಾಜಕರಿಗೆ ಎರಡು ಸಾವಿರದ ಆರು ನೂರು ಪಸ್ಕದ ಕುರಿಮರಿಗಳನ್ನೂ, ಮುನ್ನೂರು ಹೋರಿಗಳನ್ನೂ ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಅವನ ಪದಾಧಿಕಾರಿಗಳು ಕೂಡ ಜನರಿಗೂ ಯಾಜಕರಿಗೂ ಲೇವಿಯರಿಗೂ ಬಲಿಪಶುಗಳನ್ನು ಸಂತೋಷವಾಗಿ ದಾನಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವರು ಯಾಜಕರಿಗೆ ಎರಡು ಸಾವಿರದ ಆರುನೂರು ಪಾಸ್ಕದ ಕುರಿಮರಿಗಳನ್ನೂ ಮುನ್ನೂರು ಹೋರಿಗಳನ್ನೂ ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅವನ ಸರದಾರರು ಜನರಿಗೂ ಯಾಜಕರಿಗೂ ಲೇವಿಯರಿಗೂ [ಯಜ್ಞಪಶುಗಳನ್ನು] ಸಂತೋಷವಾಗಿ ಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬವರು ಯಾಜಕರಿಗೆ ಎರಡು ಸಾವಿರದ ಆರು ನೂರು ಪಸ್ಕದ ಕುರಿಮರಿಗಳನ್ನೂ ಮುನ್ನೂರು ಹೋರಿಗಳನ್ನೂ ಕೊಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಯೋಷೀಯನ ಆಡಳಿತಾಧಿಕಾರಿಗಳೂ ಯಾಜಕರಿಗೆ, ಲೇವಿಯರಿಗೆ ಮತ್ತು ಜನರಿಗೆ ಧಾರಾಳವಾಗಿ ಪಶುಗಳನ್ನು ಕೊಟ್ಟರು. ಮಹಾಯಾಜಕನಾದ ಹಿಲ್ಕೀಯ, ಜೆಕರ್ಯ ಮತ್ತು ಯೆಹೀಯೇಲನು ದೇವಾಲಯದ ಮುಖ್ಯಸ್ತರಾಗಿದ್ದರು. ಅವರು ಯಾಜಕರಿಗೆ ಎರಡು ಸಾವಿರದ ಆರು ನೂರು ಕುರಿಗಳನ್ನು ಮತ್ತು ಆಡುಗಳನ್ನು, ಮೂನ್ನೂರು ಹೋರಿಗಳನ್ನು ಪಸ್ಕಹಬ್ಬದ ಯಜ್ಞಗಳಿಗಾಗಿ ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಹಾಗೆಯೇ ಅವನ ಪ್ರಧಾನರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ, ಜೆಕರ್ಯನೂ, ಯೆಹೀಯೇಲನೂ ಪಸ್ಕದ ಬಲಿಗೋಸ್ಕರ ಎರಡು ಸಾವಿರದ ಆರುನೂರು ಪಸ್ಕದ ಬಲಿಗಳನ್ನೂ, ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು. ಅಧ್ಯಾಯವನ್ನು ನೋಡಿ |