Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 35:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಎಲ್ಲಾ ಇಸ್ರಾಯೇಲರನ್ನು ಉಪದೇಶಿಸತಕ್ಕವರೂ, ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಾಯೇಲ್ ರಾಜನೂ ಆದ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇರಿಸಿರಿ; ಅದನ್ನು ಹೆಗಲಿನ ಮೇಲೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ಅದು ನಿಮ್ಮ ಹೆಗಲುಗಳಿಗೆ ಹೊರೆಯಾಗಿರಬಾರದು; ಇನ್ನು ಮುಂದೆ ನಿಮ್ಮ ದೇವರಾದ ಯೆಹೋವನನ್ನೂ, ಆತನ ಪ್ರಜೆಗಳಾದ ಇಸ್ರಾಯೇಲರನ್ನೂ ಸೇವಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಎಲ್ಲ ಇಸ್ರಯೇಲರಿಗೆ ಉಪದೇಶಿಸತಕ್ಕವರೂ ಸರ್ವೇಶ್ವರನಿಗೆ ಪ್ರತಿಷ್ಠರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಯೇಲ್ ಅರಸನೂ ಆದ ಸೊಲೊಮೋನನು ಕಟ್ಟಿಸಿದ ಮಹಾದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇಟ್ಟುಬಿಡಿ; ಅದನ್ನು ಹೆಗಲ ಮೇಲೆ ಹೊತ್ತುಕೊಳ್ಳುವುದು ಅವಶ್ಯವಿಲ್ಲ; ಇನ್ನು ಮುಂದೆ ನಿಮ್ಮ ದೇವರಾದ ಸರ್ವೇಶ್ವರನಿಗೂ ಅವರ ಪ್ರಜೆಗಳಾದ ಇಸ್ರಯೇಲರಿಗೂ ಸೇವೆಸಲ್ಲಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಎಲ್ಲಾ ಇಸ್ರಾಯೇಲ್ಯರನ್ನು ಉಪದೇಶಿಸತಕ್ಕವರೂ ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ - ದಾವೀದನ ಮಗನೂ ಇಸ್ರಾಯೇಲ್‍ರಾಜನೂ ಆದ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇಟ್ಟುಬಿಡಿರಿ; ಅದನ್ನು ಹೆಗಲಿನ ಮೇಲೆ ಹೊತ್ತುಕೊಳ್ಳುವದು ಅವಶ್ಯವಿಲ್ಲ; ಇನ್ನು ಮುಂದೆ ನಿಮ್ಮ ದೇವರಾದ ಯೆಹೋವನನ್ನೂ ಆತನ ಪ್ರಜೆಗಳಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಎಲ್ಲಾ ಇಸ್ರೇಲರಿಗೆ ಉಪದೇಶಿಸತಕ್ಕವರೂ ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ ಯೋಷೀಯನು, “ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಸೊಲೊಮೋನನು ಕಟ್ಟಿದ ದೇವಾಲಯದೊಳಗೆ ಇಡಿರಿ. ಸೊಲೊಮೋನನು ಇಸ್ರೇಲಿನ ರಾಜನಾದ ದಾವೀದನ ಮಗ. ಆ ಪೆಟ್ಟಿಗೆಯನ್ನು ನಿಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಸ್ಥಳದಿಂದ ಸ್ಥಳಕ್ಕೆ ಹೋಗಬೇಡಿ; ನಿಮ್ಮ ದೇವರಾದ ಯೆಹೋವನ ಸೇವೆಮಾಡಿರಿ; ದೇವಜನರಾದ ಇಸ್ರೇಲರ ಸೇವೆಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 “ಸಮಸ್ತ ಇಸ್ರಾಯೇಲರಿಗೆ ಬೋಧಿಸಿದ ಮತ್ತು ಯೆಹೋವ ದೇವರಿಗೆ ಪ್ರತಿಷ್ಠಿತರಾದ ಲೇವಿಯರಿಗೆ ಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವೆಂದೆಣಿಸದೇ, ನೀವು ಅದನ್ನು ಇಸ್ರಾಯೇಲಿನ ಅರಸನಾಗಿರುವ ದಾವೀದನ ಮಗ ಸೊಲೊಮೋನನು ಕಟ್ಟಿಸಿದ ಆಲಯದಲ್ಲಿ ಇರಿಸಿ, ನಿಮ್ಮ ದೇವರಾದ ಯೆಹೋವ ದೇವರನ್ನೂ, ದೇವಜನರಾದ ಇಸ್ರಾಯೇಲರನ್ನೂ ಸೇವಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 35:3
15 ತಿಳಿವುಗಳ ಹೋಲಿಕೆ  

ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ, ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲ ಎಂದು ದಾವೀದನು ಈ ಪ್ರಕಾರ ಆಜ್ಞೆ ವಿಧಿಸಿದನು.


ಜ್ಞಾನಾನುಸಾರವಾಗಿ ಮಾತನಾಡುವುದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರನಾದ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳುವುದು ಧರ್ಮ. ನೀವೋ ದಾರಿತಪ್ಪಿದ್ದೀರಿ;


ಹಿಜ್ಕೀಯನು ಯೆಹೋವನ ಸೇವೆಯಲ್ಲಿ ನಿಪುಣರಾದ ಎಲ್ಲಾ ಲೇವಿಯರೊಡನೆ ಪ್ರೀತಿಯಿಂದ ಮಾತನಾಡಿದನು. ನೇಮಕವಾದ ಏಳು ದಿನಗಳ ಹಬ್ಬದವರೆಗೂ ಜನರು ಸಮಾಧಾನ ಯಜ್ಞಗಳನ್ನು ಅರ್ಪಿಸುತ್ತಾ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತಮ್ಮ ದೇವರೆಂದು ಅರಿಕೆಮಾಡಿಕೊಳ್ಳುತ್ತಾ ಔತಣಮಾಡಿದರು.


ಅವರು ಯಾಕೋಬ್ ವಂಶದವರಿಗೆ ನಿನ್ನ ನಿರ್ಣಯಗಳನ್ನು ತಿಳಿಸುವರು; ಇಸ್ರಾಯೇಲರಿಗೆ ನಿನ್ನ ಧರ್ಮಶಾಸ್ತ್ರವನ್ನು ಕಲಿಸುವರು. ನಿನ್ನ ಸನ್ನಿಧಿಯಲ್ಲಿ ಧೂಪಹಾಕುವರು; ನಿನ್ನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಸಮರ್ಪಿಸುವರು.


ನಮ್ಮನ್ನೇ ನಾವು ಪ್ರಚಾರಮಾಡಿಕೊಳ್ಳದೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಘೋಷಿಸುತ್ತೇವೆ.


ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿರಿಸಿದರು.


ಯೆಹೋವನ ಆಲಯದಲ್ಲಿ ಸಂಗ್ರಹವಾಗಿದ್ದ ಹಣವನ್ನು ಹೊರಗೆ ತೆಗೆಯುವಾಗ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು.


ಸೊಲೊಮೋನನು, “ಯಾವ ಯಾವ ಸ್ಥಳಗಳಲ್ಲಿ ಯೆಹೋವನ ಮಂಜೂಷವಿತ್ತೋ ಅವೆಲ್ಲವೂ ಪವಿತ್ರಸ್ಥಾನಗಳು. ಆದುದರಿಂದ ಇಸ್ರಾಯೇಲರ ಅರಸನಾದ ದಾವೀದನ ಮನೆಯಲ್ಲಿ ಫರೋಹನ ಪುತ್ರಿಯಾದ ನನ್ನ ಹೆಂಡತಿಯು ವಾಸಿಸಬಾರದು” ಅಂದುಕೊಂಡು ಆಕೆಯನ್ನು ದಾವೀದನಗರದಲ್ಲಿರಿಸದೆ, ತಾನು ಆಕೆಗಾಗಿ ಕಟ್ಟಿಸಿದ ಮಂದಿರಕ್ಕೆ ಕರೆದುಕೊಂಡು ಬಂದನು.


ಇಸ್ರಾಯೇಲರಿಗಾಗಿ ದೇವದರ್ಶನ ಗುಡಾರದ ಸೇವಾಕಾರ್ಯವನ್ನು ನಡಿಸುವುದಕ್ಕೂ ದೋಷಪರಿಹಾರವನ್ನು ಮಾಡುವುದಕ್ಕೂ ಲೇವಿಯರನ್ನು ಆರೋನನ ಮತ್ತು ಅವನ ಮಕ್ಕಳ ವಶಕ್ಕೆ ಕೊಟ್ಟಿದ್ದೇನೆ. ಹೀಗಿರುವುದರಿಂದ ಇಸ್ರಾಯೇಲರು ದೇವಾಲಯದ ಹತ್ತಿರಕ್ಕೆ ಬಂದಾಗ ಅವರಿಗೆ ಅಪಾಯವು ಸಂಭವಿಸುವುದಿಲ್ಲ.”


ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.


ಮೋಶೆಯು ಲೇವಿಯರಿಗೆ, “ಈ ಹೊತ್ತು ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಸಹೋದರರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೇ ನಿಮ್ಮನ್ನು ಯೆಹೋವನ ಸೇವೆಗೆ ಪ್ರತಿಷ್ಠಿಸಿಕೊಂಡಿದ್ದೀರಿ. ಆದುದರಿಂದ ಆತನು ಈ ದಿನ ನಿಮ್ಮನ್ನು ಆಶೀರ್ವದಿಸುವನು” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು