Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 32:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವನು ಪಟ್ಟಣದ ಹೊರಗಿರುವ ಎಲ್ಲಾ ಒರತೆಗಳನ್ನು ಮುಚ್ಚಿಸಬೇಕೆಂದು ಮನಸ್ಸು ಮಾಡಿ ತನ್ನ ಸರದಾರರ ಮತ್ತು ಶೂರರ ಮುಂದೆ ಆ ಪ್ರಸ್ತಾಪವನ್ನೆತ್ತಿ ಅವರ ಸಹಾಯವನ್ನು ಪಡೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅವನು ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸಬೇಕೆಂದು ಮನಸ್ಸುಮಾಡಿ ತನ್ನ ಪ್ರಮುಖರ ಮತ್ತು ಶೂರರ ಮುಂದೆ ಆ ಪ್ರಸ್ತಾಪವೆತ್ತಿ ಅವರ ಸಹಾಯವನ್ನು ಪಡೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವನು ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸಬೇಕೆಂದು ಮನಸ್ಸುಮಾಡಿ ತನ್ನ ಸರದಾರರ ಮತ್ತು ಶೂರರ ಮುಂದೆ ಆ ಪ್ರಸ್ತಾಪವನ್ನಿಟ್ಟು ಅವರ ಸಹಾಯವನ್ನು ಪಡಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವನು ತನ್ನ ಅಧಿಕಾರಿಗಳನ್ನೂ ಸೇನಾಪತಿಗಳನ್ನೂ ವಿಚಾರಿಸಿದನು. ಪಟ್ಟಣದ ಹೊರಗಿರುವ ಬುಗ್ಗೆಯನ್ನು ನಿಲ್ಲಿಸಿಬಿಡಬೇಕೆಂದು ಅವರೆಲ್ಲರೂ ಆಲೋಚನೆ ಮಾಡಿದರು. ಇದನ್ನು ಮಾಡಿ ಮುಗಿಸಲು ಅಧಿಕಾರಿಗಳೂ ಸೇನಾಪತಿಗಳೂ ಸಹಾಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವನು ಪಟ್ಟಣದ ಹೊರಗಿರುವ ನೀರಿನ ಬುಗ್ಗೆಗಳನ್ನು ಮುಚ್ಚಿಸುವುದಕ್ಕೆ ತನ್ನ ಪ್ರಧಾನರ ಮತ್ತು ತನ್ನ ಪರಾಕ್ರಮಶಾಲಿಗಳ ಸಂಗಡ ಯೋಚಿಸಿಕೊಂಡನು. ಅವರು ಅವನಿಗೆ ಸಹಾಯ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 32:3
13 ತಿಳಿವುಗಳ ಹೋಲಿಕೆ  

ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು, ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವುದು.


ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.


ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು.


“ಕರ್ತನ ಮನಸ್ಸನ್ನು ತಿಳಿದುಕೊಂಡವರಾರು? ಆತನಿಗೆ ಆಲೋಚನಾಕರ್ತನಾಗಿದ್ದವನು ಯಾರು?


ಯೆಹೋವನ ಆತ್ಮಕ್ಕೆ ಯಾರು ವಿಧಿಯನ್ನು ನೇಮಿಸಿದನು? ಆಲೋಚನಾ ಕರ್ತನಾಗಿ ಆತನಿಗೆ ಉಪದೇಶಿಸಿದವರು ಯಾರು?


ಎರಡನೆಯ ತಿಂಗಳಿನಲ್ಲಿ ಪಸ್ಕಹಬ್ಬವನ್ನು ಯೆರೂಸಲೇಮಿನಲ್ಲಿ ಆಚರಿಸಬೇಕೆಂದು ಅರಸನು, ಪದಾಧಿಕಾರಿಗಳು ಅಭಿಪ್ರಾಯಪಟ್ಟರು.


ಹಿಜ್ಕೀಯನ ಉಳಿದ ಚರಿತ್ರೆಯೂ, ಅವನ ಪರಾಕ್ರಮಕೃತ್ಯಗಳೂ, ಅವನು ಕೆರೆಕಾಲುವೆಗಳನ್ನು ಮಾಡಿಸಿ ಊರೊಳಗೆ ನೀರನ್ನು ತಂದ ವಿವರವೂ ಯೆಹೂದ ರಾಜಕಾಲವೃತ್ತಾಂತ ಪುಸ್ತಕ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.


ಬರೀ ಒಂದು ಬಾಯಿ ಮಾತಿನಲ್ಲಿ ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟೆಂದು ಅಂದುಕೊಳ್ಳುತ್ತಿರುವೆಯೋ? ನೀನು ಯಾರ ಮೇಲೆ ಭರವಸವಿಟ್ಟು ನನಗೆ ವಿರೋಧವಾಗಿ ತಿರುಗಿ ಬಿದ್ದಿರುವೆ?


ದೇಶದೊಳಗೆ ನುಗ್ಗಿದ ಸನ್ಹೇರೀಬನು ಯೆರೂಸಲೇಮಿನ ಮೇಲೆಯೂ ಯುದ್ಧಕ್ಕಾಗಿ ಬರಬೇಕೆಂದಿರುವುದು ಹಿಜ್ಕೀಯನಿಗೆ ತಿಳಿದುಬಂದಿತು.


ಆಗ ಅನೇಕರು ಸೇರಿ, “ಇಲ್ಲಿಗೆ ಬರುವ ಅಶ್ಶೂರದ ರಾಜರು ಬೇಕಾದಷ್ಟು ನೀರನ್ನು ನೋಡುವುದೇತಕ್ಕೆ?” ಎಂದುಕೊಂಡು ಎಲ್ಲಾ ಒರತೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹೊಳೆಯನ್ನು ಮುಚ್ಚಿಬಿಟ್ಟರು.


ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿಟ್ಟುಕೋ, ನಿನ್ನ ಕೋಟೆಗಳನ್ನು ಬಲಪಡಿಸಿಕೋ; ಮಣ್ಣಿಗೆ ಇಳಿ, ಜೇಡಿಮಣ್ಣನ್ನು ತುಳಿ, ಇಟ್ಟಿಗೆಯ ಅಚ್ಚನ್ನು ಹಿಡಿ.


ಮೇಲಣ ಗೀಹೋನ್ ಎಂಬ ಬುಗ್ಗೆಗೆ ಅಣೆಕಟ್ಟು ಕಟ್ಟಿಸಿ ಅದರ ನೀರು ನೆಟ್ಟಗೆ ದಾವೀದನಗರದ ಪಡುವಣ ತಗ್ಗಿಗೆ ಹರಿಯುವಂತೆ ಮಾಡಿದವನು ಹಿಜ್ಕೀಯನೇ. ಅವನು ತನ್ನ ಎಲ್ಲಾ ಕಾರ್ಯಗಳಲ್ಲಿಯೂ ಕೃತಾರ್ಥನಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು