2 ಪೂರ್ವಕಾಲ ವೃತ್ತಾಂತ 28:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಇದು ಸಾಲದೆಂದು ನೀವು ಯೆಹೂದ್ಯರನ್ನು, ಯೆರೂಸಲೇಮಿನವರನ್ನೂ ಬಲಾತ್ಕರಿಸಿ ದಾಸರನ್ನಾಗಿಯೂ, ದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ದೇವರಾದ ಯೆಹೋವನಿಗೆ ವಿರುದ್ಧವಾದ ಅಪರಾಧಗಳು ನಿಮ್ಮಲ್ಲಿಯೂ ಇಲ್ಲವೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಇದೂ ಸಾಲದೆಂದು ನೀವು ಯೆಹೂದ್ಯರನ್ನೂ ಜೆರುಸಲೇಮನ್ನೂ ಬಲಾತ್ಕರಿಸಿ ದಾಸದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ನಿಮ್ಮ ದೇವರಾದ ಸರ್ವೇಶ್ವರನಿಗೆ ವಿರುದ್ಧ ಅಪರಾಧಗಳನ್ನು ನೀವೂ ಮಾಡಿದ್ದೀರಲ್ಲವೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಇದು ಸಾಲದೆ ನೀವು ಯೆಹೂದ್ಯರನ್ನೂ ಯೆರೂಸಲೇವಿುನವರನ್ನೂ ಬಲಾತ್ಕರಿಸಿ ದಾಸರನ್ನಾಗಿಯೂ ದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ದೇವರಾದ ಯೆಹೋವನಿಗೆ ವಿರುದ್ಧವಾದ ಅಪರಾಧಗಳು ನಿಮ್ಮಲ್ಲಿಯೂ ಇಲ್ಲವೋ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ನೀವು ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಯೋಚಿಸುತ್ತಿದ್ದೀರಿ. ನೀವು ಕೂಡ ಯೆಹೋವನಿಗೆ ವಿರೋಧವಾಗಿ ಪಾಪಮಾಡಲಿಲ್ಲವೇ? ಹೀಗೆ ಮಾಡುವದರಿಂದ ನೀವು ಸಹ ದೇವರ ದೃಷ್ಟಿಯಲ್ಲಿ ಪಾಪಮಾಡುತ್ತಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಈಗ ನಿಮಗೆ ದಾಸರೂ, ದಾಸಿಯರೂ ಆಗಿರುವ ಹಾಗೆ ಯೆಹೂದದ ಮತ್ತು ಯೆರೂಸಲೇಮಿನ ಮಕ್ಕಳನ್ನು ನಿಮ್ಮ ವಶಮಾಡಬೇಕೆಂದು ಇದ್ದೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧಗಳು ಇಲ್ಲವೋ? ಅಧ್ಯಾಯವನ್ನು ನೋಡಿ |