2 ಪೂರ್ವಕಾಲ ವೃತ್ತಾಂತ 26:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಆದರೆ ಅವನು ಬಲಿಷ್ಠನಾದ ಮೇಲೆ ಅವನ ಅವನತಿಗಾಗಿ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಗೆ ಪ್ರವೇಶಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಆದರೆ ಅವನು ಬಲಿಷ್ಠನಾದ ಮೇಲೆ, ಗರ್ವಿಷ್ಠನೂ ಭ್ರಷ್ಠನೂ ಆದನು. ತನ್ನ ದೇವರಾದ ಸರ್ವೇಶ್ವರನಿಗೆ ದ್ರೋಹಿಯಾಗಿ, ಧೂಪವೇದಿಯ ಮೇಲೆ ತಾನೇ ಧೂಪಾರತಿ ಎತ್ತಬೇಕೆಂದು ಸರ್ವೇಶ್ವರನ ಆಲಯದ ಒಳಕ್ಕೆ ಹೋದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಆದರೆ ಅವನು ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಕ್ಕೆ ಹೋದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಬಲಶಾಲಿಯಾದ ಉಜ್ಜೀಯನಲ್ಲಿ ನಾಶಕರವಾದ ಗರ್ವವು ಸೇರಿತು. ಅವನು ತನ್ನ ದೇವರಾದ ಯೆಹೋವನಿಗೆ ದ್ರೋಹ ಮಾಡಿದನು. ಅವನು ದೇವಾಲಯದೊಳಗೆ ಧೂಪವೇದಿಕೆಯಲ್ಲಿ ತಾನೇ ಧೂಪವನ್ನು ಹಾಕಲು ಹೋದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಆದರೆ ಅವನು ಬಲ ಹೊಂದಿದ ಮೇಲೆ ಅವನ ಗರ್ವವು ನಾಶಕ್ಕೆ ನಡೆಸಿತು. ಅವನು ಧೂಪಪೀಠದ ಮೇಲೆ ಧೂಪಸುಡುವುದಕ್ಕೂ, ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದನು. ಅಧ್ಯಾಯವನ್ನು ನೋಡಿ |
ಇದಲ್ಲದೆ, ಅವನು ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನು ಬಳಸುವುದಕ್ಕಾಗಿ, ತಜ್ಞರ ಆಜ್ಞೆಯ ಮೇರೆಗೆ ಯಂತ್ರಗಳನ್ನೂ ಮಾಡಿಸಿ, ಅವುಗಳನ್ನು ಯೆರೂಸಲೇಮಿನ ಗೋಪುರಗಳ ಮೇಲೆಯೂ, ಕೋಟೆಕೊತ್ತಲಗಳನ್ನು ಮೇಲೆಯೂ ಇಡಿಸಿದ್ದನು. ಅವನು ಬಲಿಷ್ಠನಾಗುವ ಹಾಗೆ ದೇವರ ಅತಿಶಯವಾದ ಸಹಾಯವು ಆಶ್ಚರ್ಯವಾದ ರೀತಿಯಲ್ಲಿ ಅವನಿಗೆ ದೊರೆಯುತ್ತಿದ್ದುದರಿಂದ; ಅವನ ಕೀರ್ತಿಯೂ ಬಹು ದೂರದ ಮೇರೆಯವರೆಗೂ ಹಬ್ಬಿತು.