Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 25:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ಅಮಚ್ಯನು ಎಫ್ರಾಯೀಮ್ಯ ರಿಂದ ಬಂದ ಸೈನಿಕರನ್ನು ಬೇರೆ ಮಾಡಿ, ಅವರನ್ನು ಅವರ ದೇಶಕ್ಕೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಬಹಳ ಕೋಪಗೊಂಡು ತಮ್ಮ ದೇಶಕ್ಕೆ ಹೊರಟು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಆಗ ಅಮಚ್ಯನು ಎಫ್ರಯಿಮರಿಂದ ಬಂದ ಸೈನಿಕರನ್ನು ಬೇರೆಮಾಡಿ, ಅವರನ್ನು ಅವರ ನಾಡಿಗೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಕಡುಕೋಪಗೊಂಡು, ಬಲುಸಿಟ್ಟಿನಿಂದ ತಮ್ಮ ನಾಡಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಗ ಅಮಚ್ಯನು ಎಫ್ರಾಯೀಮ್ಯರಿಂದ ಬಂದ ಸೈನಿಕರನ್ನು ಬೇರೆ ಮಾಡಿ ಅವರನ್ನು ಅವರ ದೇಶಕ್ಕೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಬಹುಕೋಪಗೊಂಡು ಬಲುಸಿಟ್ಟಿನಿಂದ ತಮ್ಮ ದೇಶಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅಮಚ್ಯನು ಇಸ್ರೇಲಿನ ಸೈನಿಕರನ್ನು ಎಫ್ರಾಯೀಮ್ ಪ್ರಾಂತ್ಯಕ್ಕೆ ಕಳುಹಿಸಿದನು. ಅವರು ಯೆಹೂದದ ಅರಸನ ಮೇಲೆಯೂ ಜನರ ಮೇಲೆಯೂ ಸಿಟ್ಟುಗೊಂಡು ಕೋಪದಿಂದಲೇ ತಮ್ಮ ಮನೆಗಳಿಗೆ ಹಿಂತೆರಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆಗ ಅಮಚ್ಯನು ಎಫ್ರಾಯೀಮಿನಿಂದ ತನ್ನ ಬಳಿಗೆ ಬಂದ ಸೈನಿಕರು ತಮ್ಮ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವರನ್ನು ಕಳುಹಿಸಿಬಿಟ್ಟನು. ಆದಕಾರಣ ಅವರ ಕೋಪವು ಯೆಹೂದದ ಮೇಲೆ ಬಹಳವಾಗಿ ಉರಿಯಿತು. ಅವರು ಕೋಪಗೊಂಡವರಾಗಿ ತಮ್ಮ ಮನೆಗೆ ತಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 25:10
5 ತಿಳಿವುಗಳ ಹೋಲಿಕೆ  

ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.


‘ಯೆಹೋವನ ಮಾತನ್ನು ಕೇಳಿರಿ, ನೀವು ನಿಮ್ಮ ಸಹೋದರರಾದ ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರೂ ಹಿಂತಿರುಗಿ ಹೋಗಿರಿ. ಈ ಕಾರ್ಯವು ಯೆಹೋವನಿಂದಾಗಿದೆ’ ಎಂದು ಹೇಳಬೇಕು” ಎಂಬ ಯೆಹೋವನ ಮಾತನ್ನು ಜನರಿಗೆ ಹೇಳಿದನು. ಆಗ ಅವರು ಯೆಹೋವನ ಮಾತನ್ನು ಕೇಳಿ ವಿಧೇಯರಾಗಿ ಹಿಂದಿರುಗಿ ಹೋದರು.


ಆಗ ಇಸ್ರಾಯೇಲರು ಯೆಹೂದ್ಯರಿಗೆ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟಲ್ಲಾ, ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಹಕ್ಕು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ಕಡೆಗಾಣಿಸಿದ್ದೇಕೆ? ನಮ್ಮ ಅರಸನನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ?” ಎಂದರು. ಇಸ್ರಾಯೇಲರ ಮಾತುಗಳಿಗಿಂತ ಯೆಹೂದ್ಯರ ಮಾತುಗಳು ಕಠಿಣವಾಗಿದ್ದವು.


ಅಮಚ್ಯನು ದೇವರ ಮನುಷ್ಯನನ್ನು, “ಹಾಗಾದರೆ ನಾನು ಇಸ್ರಾಯೇಲ್ ಸೈನ್ಯಕ್ಕೋಸ್ಕರ ನೂರು ತಲಾಂತುಗಳನ್ನು ಕೊಟ್ಟ ವಿಷಯದಲ್ಲಿ ನಾನೇನು ಮಾಡಬೇಕು?” ಎಂದು ಕೇಳಲು ಅವನು, “ಯೆಹೋವನು ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿನಗೆ ಕೊಡಬಲ್ಲನು” ಎಂದನು.


ಅಮಚ್ಯನಾದರೋ ಧೈರ್ಯದಿಂದ ತನ್ನ ಸೈನ್ಯವನ್ನು ಕರೆದುಕೊಂಡು, ಉಪ್ಪಿನ ತಗ್ಗಿಗೆ ಹೋಗಿ ಸೇಯೀರ್ಯರಲ್ಲಿ ಹತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು