2 ಪೂರ್ವಕಾಲ ವೃತ್ತಾಂತ 23:2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಇವರು ಯೆಹೂದದಲ್ಲೆಲ್ಲಾ ಸಂಚರಿಸಿ ಎಲ್ಲಾ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲರ ಗೋತ್ರ ಪ್ರಧಾನರನ್ನೂ ಒಟ್ಟುಗೂಡಿಸಲು ಅವರು ಯೆರೂಸಲೇಮಿಗೆ ಬಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಇವರು ಜುದೇಯದಲ್ಲೆಲ್ಲಾ ಸಂಚರಿಸಿ ಎಲ್ಲ ಪಟ್ಟಣಗಳಿಂದ ಲೇವಿಯರನ್ನೂ ಇಸ್ರಯೇಲರ ಗೋತ್ರಪ್ರಧಾನರನ್ನೂ ಕೂಡಿಸಿದರು. ಅವರೆಲ್ಲರು ಜೆರುಸಲೇಮಿಗೆ ಬಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಇವರು ಯೆಹೂದದಲ್ಲೆಲ್ಲಾ ಸಂಚರಿಸಿ ಎಲ್ಲಾ ಪಟ್ಟಣಗಳಿಂದ ಲೇವಿಯರನ್ನೂ ಇಸ್ರಾಯೇಲ್ಯರ ಗೋತ್ರಪ್ರಧಾನರನ್ನೂ ಕೂಡಿಸಲು ಅವರು ಯೆರೂಸಲೇವಿುಗೆ ಬಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಅವರು ಯೆಹೂದ ರಾಜ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿದ್ದ ಲೇವಿಯರನ್ನು ಒಟ್ಟಾಗಿ ಸೇರಿಸಿದರು. ಅಲ್ಲದೆ ಗೋತ್ರಪ್ರಧಾನರನ್ನೂ ಒಟ್ಟಾಗಿ ಸೇರಿಸಿ, ಅವರನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಇವರು ಯೆಹೂದವನ್ನು ಸಂಚರಿಸಿ ಯೆಹೂದದ ಸಮಸ್ತ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲಿನ ಕುಟುಂಬದಲ್ಲಿ ಮುಖ್ಯಸ್ಥರನ್ನೂ ಕೂಡಿಸಿಕೊಂಡು, ಯೆರೂಸಲೇಮಿಗೆ ಬಂದರು. ಅಧ್ಯಾಯವನ್ನು ನೋಡಿ |
ನೆತನೇಲನ ಮಗನಾದ ಶೆಮಾಯನೆಂಬ ಲೇವಿಯ ಲೇಖಕನು ಅರಸನ ಮುಂದೆಯೂ, ಅಧಿಪತಿಗಳು, ಯಾಜಕನಾದ ಚಾದೋಕ್, ಎಬ್ಯಾತಾರನ ಮಗನಾದ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರು ಇವರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರನ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸಬೇಕೆಂದು ನೇಮಿಸಿ ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡಿದರು.