2 ಪೂರ್ವಕಾಲ ವೃತ್ತಾಂತ 20:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ತಮ್ಮ ಮೇಲೆ ನ್ಯಾಯ ತೀರ್ಪಿನ ಖಡ್ಗ, ಘೋರವ್ಯಾಧಿ, ಕ್ಷಾಮ ಮೊದಲಾದ ಆಪತ್ತುಗಳು ನಮಗೆ ಬರುವಾಗ, ನಾವು ನಿನ್ನ ನಾಮ ಮಹತ್ತು ಇರುವ ಈ ಆಲಯದ ಮುಂದೆಯೂ, ನಿನ್ನ ಮುಂದೆಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವುದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ತಮ್ಮ ಮೇಲೆ ಖಡ್ಗವಿಧಿ, ಘೋರವ್ಯಾಧಿ, ಕ್ಷಾಮಡಾಮರ, ಮೊದಲಾದ ಆಪತ್ತುಗಳು ಬರುವಾಗ, ನಿಮ್ಮ ನಾಮಮಹಿಮೆ ಇರುವ ಈ ಆಲಯದ ಮುಂದೆಯೂ ನಿಮ್ಮ ಮುಂದೆಯೂ ನಿಂತು, ತಮ್ಮ ಇಕ್ಕಟ್ಟಿನಲ್ಲಿ ನಿಮಗೆ ಮೊರೆ ಇಡುವುದಾದರೆ ನೀವು ಆಲಿಸಿ ರಕ್ಷಿಸುವಿರಿ ಎಂದುಕೊಂಡರಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ತಮ್ಮ ಮೇಲೆ ಖಡ್ಗವಿಧಿ ಘೋರವ್ಯಾಧಿ ಕ್ಷಾಮ ಮೊದಲಾದ ಆಪತ್ತುಗಳು ಬರುವಾಗ ತಾವು ನಿನ್ನ ನಾಮಮಹತ್ತು ಇರುವ ಈ ಆಲಯದ ಮುಂದೆಯೂ ನಿನ್ನ ಮುಂದೆಯೂ ನಿಂತು ತಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡರಷ್ಟೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ? ಅಧ್ಯಾಯವನ್ನು ನೋಡಿ |