2 ಪೂರ್ವಕಾಲ ವೃತ್ತಾಂತ 20:27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಆ ನಂತರ ಯೆಹೂದ್ಯರೂ ಯೆರೂಸಲೇಮಿನವರೂ ಅವರ ಮುಂದೆ ಯೆಹೋಷಾಫಾಟನೂ ಯೆಹೋವನು ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆಂದು ಜಯಘೋಷ ಮಾಡುತ್ತಾ ಯೆರೂಸಲೇಮಿಗೆ ಹಿಂತಿರುಗಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಆಮೇಲೆ ಯೆಹೂದ್ಯರು, ಜೆರುಸಲೇಮಿನವರು, ಅವರ ಮುಂಗಡೆಯಲ್ಲಿ ಯೆಹೋಷಾಫಾಟನು, ಸರ್ವೇಶ್ವರ ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾರೆಂದು ಜಯಘೋಷ ಮಾಡುತ್ತಾ ಜೆರುಸಲೇಮಿಗೆ ಹಿಂದಿರುಗಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆಮೇಲೆ ಯೆಹೂದ್ಯರೂ ಯೆರೂಸಲೇವಿುನವರೂ ಅವರ ಮುಂಗಡೆಯಲ್ಲಿ ಯೆಹೋಷಾಫಾಟನೂ ಯೆಹೋವನು ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆಂದು ಜಯಘೋಷ ಮಾಡುತ್ತಾ ಯೆರೂಸಲೇವಿುಗೆ ಹಿಂದಿರುಗಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ತರುವಾಯ ಯೆಹೋಷಾಫಾಟನು ತನ್ನ ಸೈನ್ಯವನ್ನು ಜೆರುಸಲೇಮಿಗೆ ನಡಿಸಿದನು. ಶತ್ರುಗಳ ಮೇಲೆ ಯೆಹೋವನು ನೀಡಿದ ಜಯಕ್ಕಾಗಿ ಅವರು ಹರ್ಷಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ಯೆಹೋವ ದೇವರು ಅವರ ಶತ್ರುಗಳ ಮೇಲೆ ಅವರು ಸಂತೋಷಪಡುವಂತೆ ಮಾಡಿದ್ದರಿಂದ, ಅವರು ಹರ್ಷಗೊಂಡು ಯೆರೂಸಲೇಮಿಗೆ ತಿರುಗಿ ಹೋಗುವುದಕ್ಕೆ ಯೆಹೂದ ಮತ್ತು ಯೆರೂಸಲೇಮಿನವರ ಮುಂಭಾಗದಲ್ಲಿ ಯೆಹೋಷಾಫಾಟನೂ ಹೊರಟು, ಅಧ್ಯಾಯವನ್ನು ನೋಡಿ |