2 ಪೂರ್ವಕಾಲ ವೃತ್ತಾಂತ 14:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿ ಬರ್ಜಿಗಳನ್ನು ಹಿಡಿದಿರುವ ಮೂರು ಲಕ್ಷ ಮಂದಿ ಯೆಹೂದ್ಯ ಸೈನಿಕರಿದ್ದರು. ಖೇಡ್ಯ ಹಿಡಿದವರೂ ಬಿಲ್ಲುಗಾರರೂ ಆದ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಬೆನ್ಯಾಮೀನ್ ಸೈನಿಕರೂ ಇದ್ದರು. ಇವರೆಲ್ಲರೂ ಯುದ್ಧವೀರರಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿ ಬರ್ಜಿಗಳನ್ನು ಹಿಡಿದ ಮೂರು ಲಕ್ಷ ಮಂದಿ ಯೆಹೂದ್ಯರಿದ್ದರು. ಖೇಡ್ಯ ಹಿಡಿದವರೂ ಬಿಲ್ಲುಗಾರರೂ ಆದ ಎರಡು ಲಕ್ಷದ ಎಂಬತ್ತು ಸಾವಿರ ಮಂದಿ ಬೆನ್ಯಾಮೀನ್ಯರೂ ಇದ್ದರು. ಇವರೆಲ್ಲರು ರಣವೀರರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿಬರ್ಜಿಗಳನ್ನು ಹಿಡಿದಿರುವ ಮೂರು ಲಕ್ಷ ಮಂದಿ ಯೆಹೂದ್ಯರೂ ಖೇಡ್ಯ ಹಿಡಿದವರೂ ಬಿಲ್ಲುಗಾರರೂ ಆಗಿರುವ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಬೆನ್ಯಾಮೀನ್ಯರೂ ಇದ್ದರು. ಇವರೆಲ್ಲರೂ ರಣವೀರರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆಸನ ಬಳಿ ಮೂರು ಲಕ್ಷ ಸೈನಿಕರಿದ್ದರು, ಯೆಹೂದಕುಲದ ಇವರು ಗುರಾಣಿಗಳನ್ನೂ ಬರ್ಜಿಗಳನ್ನೂ ಬಳಸಬಲ್ಲವರಾಗಿದ್ದರು. ಇವರಲ್ಲದೆ ಬೆನ್ಯಾಮೀನ್ ಕುಲದಿಂದ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಸೈನಿಕರಿದ್ದರು. ಇವರು ಸಣ್ಣ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಬಳಸಬಲ್ಲವರಾಗಿದ್ದರು. ಇವರೆಲ್ಲರೂ ರಣವೀರರಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಇದಲ್ಲದೆ ಆಸನಿಗೆ ದೊಡ್ಡ ಗುರಾಣಿಗಳನ್ನೂ, ಈಟಿಗಳನ್ನೂ ಹಿಡಿಯುವ ಸೈನ್ಯವಿತ್ತು. ಯೆಹೂದದವರು ಮೂರು ಲಕ್ಷ ಮಂದಿಯೂ, ಬೆನ್ಯಾಮೀನವರಲ್ಲಿ ಚಿಕ್ಕ ಗುರಾಣಿಗಳನ್ನು ಹಿಡಿಯುವ, ಬಿಲ್ಲುಗಳನ್ನು ಎಸೆಯುವ ಎರಡು ಲಕ್ಷದ ಎಂಬತ್ತು ಸಾವಿರ ಮಂದಿಯೂ ಇದ್ದರು. ಇವರೆಲ್ಲರು ಪರಾಕ್ರಮಶಾಲಿ ಯುದ್ಧವೀರರಾಗಿದ್ದರು. ಅಧ್ಯಾಯವನ್ನು ನೋಡಿ |