2 ಕೊರಿಂಥದವರಿಗೆ 5:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಗಳನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹಿಗ್ಗದೆ ತೋರಿಕೆಯ ವಿಷಯದಲ್ಲಿ ಮಾತ್ರ ಹಿಗ್ಗುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳುವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯದಲ್ಲಿ ಹಿಗ್ಗುವದಕ್ಕೆ ನಿಮಗೆ ಆಸ್ಪದಕೊಡುತ್ತೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್12 ತುಮ್ಚ್ಯಾ ಇದ್ರಾಕ್ ಅಮ್ಚ್ಯಾಚ್ ವಿಶಯಾತ್ ಅನಿಪರ್ತುನ್ ಬೊಲುಕ್ ಮಿಯಾ ಬಗಿನಾ, ಅಮ್ಚ್ಯಾ ವಿಶಯಾತ್ ಅಭಿಮಾನ್ ಸಾಂಗುಕ್ ತುಮ್ಕಾ ಎಕ್ ಅವ್ಕಾಸ್ ದಿವ್ಚೆ ಮನುನ್ ಮಿಯಾ ಬಗುಕ್ ಲಾಗ್ಲಾ. ಹೆಚ್ಯಾ ವೈನಾ ಎಕ್ಲ್ಯಾಚ್ಯಾ ಮನಾಚೆ ಖರೆ ಮಹತ್ವ್ ಸೊಡುನ್, ತೆಚ್ಯಾ ಭಾಯ್ಲ್ಯಾ ದರ್ಬಾರಾಚೆ ಮೊಟೆಪಾನ್ ಚಿಂತ್ತಲ್ಯಾಕ್ನಿ ಪಾಜೆ ಹೊಲ್ಲೊ ಜಬಾಬ್ ತುಮ್ಚೆನ್ ದಿವ್ಕ್ ಹೊತಾ. ಅಧ್ಯಾಯವನ್ನು ನೋಡಿ |