2 ಕೊರಿಂಥದವರಿಗೆ 11:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ನಾವು ಬಲವಿಲ್ಲದವರಾಗಿದ್ದೆವೆಂಬುದನ್ನು ನಾಚಿಕೆಗೇಡಿನಿಂದ ಹೇಳುತ್ತಿದ್ದೇನೆ. ಯಾವ ಆಧಾರದಿಂದ ಯಾವನಾದರೂ ದೊಡ್ಡಸ್ತಿಕೆಯಿಂದ ಹೊಗಳಿಕೊಳ್ಳುತ್ತಾನೋ ಅದರಿಂದಲೇ ನಾನು ಹೊಗಳಿಕೊಳ್ಳುವುದಾಗಿ ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಇದನ್ನೆಲ್ಲಾ ಮಾಡುವ ಸಾಹಸ ನಮಗಿಲ್ಲವೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಯಾರಿಗಾದರೂ ಯಾರ ವಿಷಯದಲ್ಲಾದರೂ ಹೊಗಳಿಕೊಳ್ಳುವ ಧೈರ್ಯವಿದ್ದರೆ ಅದಕ್ಕಿಂತ ಹೆಚ್ಚಿನ ಧೈರ್ಯ ನನಗಿದೆ. ಇದನ್ನು ನಾನು ಹುಚ್ಚನಂತೆಯೇ ಹೇಳುತ್ತಿದ್ದೇನೆ ಎಂದು ಭಾವಿಸಿಕೊಳ್ಳಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ನಾವು ಬಲವಿಲ್ಲದವರಾಗಿದ್ದೆವೆಂಬಂತೆ ಇದನ್ನು ನನ್ನ ಅವಮಾನಕ್ಕೆ ಹೇಳಿದ್ದರೂ ಯಾವ ಆಧಾರದಿಂದ ಯಾವನಾದರೂ ಧೈರ್ಯವಾಗಿ ನಡಕೊಳ್ಳುತ್ತಾನೋ ಅದರಿಂದಲೇ ನಾನೂ ಧೈರ್ಯವುಳ್ಳವನಾಗಿದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಇದನ್ನು ಹೇಳುವುದಕ್ಕೇ ನಾಚಿಕೆಯಾಗುತ್ತದೆ. ಆದರೆ, ನಿಮ್ಮೊಂದಿಗೆ ಆ ರೀತಿ ನಡೆದುಕೊಳ್ಳುವಷ್ಟು “ಬಲ” ನಮಗಿರಲಿಲ್ಲ! ಆದರೆ ಹೊಗಳಿಕೊಳ್ಳಲು ಯಾರಿಗಾದರೂ ಸಾಕಷ್ಟು ಧೈರ್ಯವಿದ್ದರೆ ನಾನು ಸಹ ಧೈರ್ಯದಿಂದ ಹೊಗಳಿಕೊಳ್ಳುತ್ತೇನೆ. (ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಹೀಗೆಲ್ಲಾ ಮಾಡಲು ಬಹಳ ಬಲಹೀನರಾದ ನಮಗೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ! ಯಾವುದನ್ನು ಇತರರು ಹೊಗಳಿಕೊಳ್ಳುವುದಕ್ಕೆ ಧೈರ್ಯ ಮಾಡುತ್ತಾರೋ, ಅದನ್ನು ನಾನು ಬುದ್ಧಿಹೀನನಂತೆ ಹೊಗಳುವ ಧೈರ್ಯ ಮಾಡುತ್ತೇನೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ಹೆಚ್ಯಾ ಸರ್ಕೆ ಚಲುಕ್ ಮಾಕಾ ಬಳ್ ನಾ ಮನುನ್ ಮಿಯಾ ವಳಕಲ್ಲ್ಯಾ ವೈನಾ ಮಾಕಾ ಲಜ್ಜಾ ಕರ್ಲ್ಯಾಬಿ ಪರ್ವಾ ನಾ. ಖರೆ ಕೊನ್ ಬಿ ಮಾನುಸ್ ಅಪ್ನಾಚಿ ಬಡಾಯ್ ಬೊಲುಕ್ ಫಿಡೆ ಯೆತಾ ಹೊಲ್ಯಾರ್, ಪಿಶ್ಯಾಚ್ಯಾ ಸಾರ್ಕೆ ಮಿಯಾ ಹೆ ಮನ್ತಾ ಅನಿ ಮಿಯಾಬಿ ಬಡಾಯ್ ಸಾಂಗುಕ್ ಫಿಡೆ ಯೆತಾ. ಅಧ್ಯಾಯವನ್ನು ನೋಡಿ |