Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 9:15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅರಸನಾದ ಯೋರಾಮನು, ಅರಾಮ್ಯರ ಅರಸನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಗಾಯ ಹೊಂದಿದ್ದರಿಂದ, ಅದನ್ನು ವಾಸಿಮಾಡಿಕೊಳ್ಳುವುದಕ್ಕಾಗಿ ಹಿಂದಿರುಗಿ ಇಜ್ರೇಲ ಪಟ್ಟಣಕ್ಕೆ ಬಂದಿದ್ದನು. ಯೇಹುವು ತನ್ನ ಜೊತೆಗಾರರಿಗೆ, “ನೀವು ನನ್ನವರಾಗಿದ್ದರೆ ಈ ಸುದ್ದಿಯು ಇಜ್ರೇಲನ್ನು ಮುಟ್ಟದಂತೆ ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಹೋಗದಂತೆ ನೋಡಿಕೊಳ್ಳಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆಗ ಗಾಯಗೊಂಡು ಅದನ್ನು ಮಾಗಿಸಿಕೊಳ್ಳುವುದಕ್ಕಾಗಿ ಹಿಂದಿರುಗಿ ಜೆಸ್ರೀಲಿಗೆ ಬಂದಿದ್ದನು.) ಯೇಹುವು ತನ್ನ ಜೊತೆಗಾರನಿಗೆ, “ನೀವು ನನ್ನವರಾಗಿದ್ದರೆ, ಈ ಸುದ್ದಿ ಜೆಸ್ರೀಲನ್ನು ಮುಟ್ಟದಂತೆ, ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಬಿಡಬೇಡಿ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಯುದ್ಧಮಾಡುತ್ತಿರುವಾಗ ಗಾಯ ಹೊಂದಿದದರಿಂದ ಅದನ್ನು ಮಾಯಿಸಿಕೊಳ್ಳುವದಕ್ಕಾಗಿ ಹಿಂದಿರುಗಿ ಇಜ್ರೇಲಿಗೆ ಬಂದಿದ್ದನು.) ಯೇಹುವು ತನ್ನ ಜೊತೆಗಾರರಿಗೆ - ನೀವು ನನ್ನವರಾಗಿದ್ದರೆ ಈ ಸುದ್ದಿಯು ಇಜ್ರೇಲನ್ನು ಮುಟ್ಟದಂತೆ ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಬಿಡಬೇಡಿರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದರೆ ರಾಜನಾದ ಯೋರಾಮನಿಗೆ ಅರಾಮ್ಯರು ಗಾಯಗೊಳಿಸಿದ್ದರಿಂದ ಅವನು ವಾಸಿಮಾಡಿಕೊಳ್ಳಲು ಇಜ್ರೇಲಿಗೆ ಹಿಂದಿರುಗಿ ಬಂದಿದ್ದನು. (ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯೋರಾಮನು ಹೋರಾಟ ಮಾಡಿದಾಗ ಅರಾಮ್ಯರು ಅವನನ್ನು ಗಾಯಗೊಳಿಸಿದ್ದರು.) ಯೇಹು ಅಧಿಕಾರಿಗಳಿಗೆ, “ನಾನು ನೂತನ ರಾಜನೆಂದು ನೀವು ಒಪ್ಪಿಕೊಂಡರೆ, ಈ ಸುದ್ದಿಯನ್ನು ಇಜ್ರೇಲಿನಲ್ಲಿ ಹೇಳಲು ಯಾರೂ ನಗರದಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಕೊಡದಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ಅರಸನಾದ ಯೋರಾಮನು ಅರಾಮಿನ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ, ಅರಾಮ್ಯರು ತನ್ನನ್ನು ಹೊಡೆದ ಗಾಯವನ್ನು ಸ್ವಸ್ಥಮಾಡಿಕೊಳ್ಳುವ ನಿಮಿತ್ತ ಇಜ್ರೆಯೇಲಿಗೆ ಹೋಗಿದ್ದನು. ಆಗ ಯೇಹುವು, “ನಿಮಗೆ ಮನಸ್ಸಿದ್ದರೆ ಇದನ್ನು ಇಜ್ರೆಯೇಲಿಗೆ ಹೋಗಿ ತಿಳಿಸಲು ಪಟ್ಟಣದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 9:15
5 ತಿಳಿವುಗಳ ಹೋಲಿಕೆ  

ಅರಾಮ್ಯರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಲು ಅವನಿಗೆ ರಾಮದಲ್ಲಿ ಆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕಾಗಿ ಇಜ್ರೇಲಿಗೆ ಬಂದನು. ಹಜಾಯೇಲನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅಹಾಬನ ಮಗನಾದ ಯೋರಾಮನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.


ಅರಾಮ್ಯರು ಯೋರಾಮನಿಗೆ ರಾಮದಲ್ಲಿ ಮಾಡಿದ ಗಾಯಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಾಗಿ ಅವನು ಇಜ್ರೇಲಿಗೆ ಬಂದನು. ಯೋರಾಮನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗನಾಗಿರುವ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.


ಕರ್ಮೆಲ್, ಜೀಫ್, ಯುಟ್ಟಾ,


ಇದಲ್ಲದೆ ಅಹಜ್ಯನು ಅರಾಮ್ಯರ ಅರಸನಾದ ಹಜಾಯೇಲನೊಡನೆ ಯುದ್ಧಮಾಡುವುದಕ್ಕಾಗಿ ಅಹಾಬನ ಮಗನಾದ ಯೋರಾಮನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು