Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 8:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅರಸನು ಈ ವಿಷಯವಾಗಿ ಆ ಸ್ತ್ರೀಯನ್ನು ವಿಚಾರಿಸಲು ಆಕೆಯು ಅದರಂತೆಯೇ ಎಲೀಷನಿಂದಾದ ದೇವರ ಮಹಿಮೆಯ ವಿಷಯವನ್ನು ವಿವರವಾಗಿ ತಿಳಿಸಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಈಕೆಯ ಹೊಲಮನೆಗಳನ್ನೂ, ಈಕೆಯು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಅವಳಿಗೆ ಕೊಡಿಸು” ಎಂದು ಆಜ್ಞಾಪಿಸಿ, ಅವನನ್ನು ಆಕೆಯ ಜೊತೆಯಲ್ಲಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅರಸನು ಈ ಸಂಗತಿಯ ವಿಷಯವಾಗಿ ಆ ಸ್ತ್ರೀಯನ್ನೇ ವಿಚಾರಿಸಿದನು. ಆಕೆ ಅದರಂತೆಯೇ ಹೇಳಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು, “ಹೋಗಿ ಈಕೆಯ ಹೊಲಮನೆಗಳನ್ನೂ ಈಕೆ ಈ ನಾಡನ್ನು ಬಿಟ್ಟಂದಿನಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಕೊಡಿಸು,” ಎಂದು ಆಜ್ಞಾಪಿಸಿ ಅವನನ್ನು ಆಕೆಯ ಜೊತೆಯಲ್ಲೇ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅರಸನು ಈ ಸಂಗತಿಯ ವಿಷಯವಾಗಿ ಆ ಸ್ತ್ರೀಯನ್ನು ವಿಚಾರಿಸಲು ಆಕೆಯು ಅದರಂತೆಯೇ ಹೇಳಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ - ಹೋಗಿ ಈಕೆಯ ಹೊಲಮನೆಗಳನ್ನೂ ಈಕೆಯು ದೇಶವನ್ನು ಬಿಟ್ಟಂದಿನಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಕೊಡಿಸು ಎಂದು ಆಜ್ಞಾಪಿಸಿ ಅವನನ್ನು ಆಕೆಯ ಜೊತೆಯಲ್ಲಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ರಾಜನು ಆ ಸ್ತ್ರೀಯನ್ನು ಕೇಳಿದಾಗ, ಅವಳು ತನಗೆ ಸಂಭವಿಸಿದ್ದನ್ನು ಮತ್ತು ತನಗಿದ್ದ ಇಚ್ಛೆಯನ್ನು ತಿಳಿಸಿದಳು. ಆಗ ರಾಜನು ಅವಳಿಗೆ ಸಹಾಯಮಾಡಲು ಒಬ್ಬ ಅಧಿಕಾರಿಯನ್ನು ಕರೆದು, “ಅವಳಿಗೆ ಸೇರಬೇಕಾದ ಆಸ್ತಿಯೆಲ್ಲವನ್ನೂ ಆಕೆಗೆ ಕೊಡಿಸು. ಅವಳು ದೇಶವನ್ನು ಬಿಟ್ಟಂದಿನಿಂದ ಈವರೆಗಿನ ಆಕೆಯ ಭೂಮಿಯ ಉತ್ಪಾದನೆಯನ್ನೂ ಅವಳಿಗೆ ಕೊಡಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅರಸನು ಆ ಸ್ತ್ರೀಯನ್ನು ವಿಚಾರಿಸಿದಾಗ, ಅವಳು ವಿವರವಾಗಿ ಹೇಳಿದಳು. ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ, ಅವನಿಗೆ, “ಅವಳಿಗೆ ಸೇರಿದ ಎಲ್ಲವನ್ನು, ಅವಳು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೆ ಅವಳಿಗೆ ಸಲ್ಲತಕ್ಕ ಆ ಹೊಲದ ಆದಾಯವನ್ನೆಲ್ಲಾ ಅವಳಿಗೆ ಕೊಡಿಸು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 8:6
10 ತಿಳಿವುಗಳ ಹೋಲಿಕೆ  

ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ಇರುವ ನೀರಿನ ಕಾಲುವೆಗಳಂತೆ ಇವೆ, ಆತನು ತನಗೆ ಬೇಕಾದ ಕಡೆಗೆ ಅದನ್ನು ತಿರುಗಿಸುತ್ತಾನೆ.


ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.


ಆಗ ದಾವೀದನು ಅವನಿಗೆ, “ಹೆದರಬೇಡ, ನಿನ್ನ ತಂದೆಯಾದ ಯೋನಾತಾನನನ್ನು ನೆನಸಿ ನಿನಗೆ ದಯೆತೋರಿಸುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ಹಿಂದಕ್ಕೆ ಕೊಡುತ್ತೇನೆ, ಮತ್ತು ನೀನು ಪ್ರತಿ ದಿನ ನನ್ನ ಪಂಕ್ತಿಯಲ್ಲೇ ಊಟಮಾಡಬೇಕು” ಎಂದು ಹೇಳಿದನು.


ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.


ಅವನು ಕಣ್ಣೆತ್ತಿ ಕಿಟಕಿಯ ಕಡೆಗೆ ನೋಡಿ, “ಅಲ್ಲಿ ನನ್ನ ಪಕ್ಷದವರು ಯಾರಿದ್ದಾರೆ?” ಎಂದು ಕೂಗಿದನು. ಕೂಡಲೆ ಆ ಕಿಟಕಿಯಿಂದ ಇಬ್ಬರು, ಮೂವರು ಕಂಚುಕಿಗಳು ಅವನ ಕಡೆಗೆ ನೋಡಿದರು.


ಅವನು ನಿಮಗೆ ದೂರವಾಗಿದ್ದರೆ ಇಲ್ಲವೆ ಅವನು ಯಾರೋ ಎಂದು ನಿಮಗೆ ತಿಳಿಯದೆ ಹೋದರೆ, ಆ ಪಶುವನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ ನೀವು ಅದನ್ನು ಅವನಿಗೆ ಹಿಂತಿರುಗಿ ಕೊಡಬೇಕು.


ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ತೆಗೆದುಕೊಂಡು ಹೋಗಿ ಐಗುಪ್ತ ದೇಶದ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದರು. ಇವನು ಅರಸನ ಮೈಗಾವಲಿನವರ ದಳಪತಿಯೂ ಆಗಿದ್ದನು.


ಆ ಅರಸನು ದೂತರಿಗೆ, “ಇಸ್ರಾಯೇಲರು ಐಗುಪ್ತದಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್ ಮತ್ತು ಯೊರ್ದನ್ ಹೊಳೆಗಳವರೆಗೂ ಇದ್ದ ನನ್ನ ದೇಶವನ್ನು ವಶಪಡಿಸಿಕೊಂಡರಲ್ಲಾ; ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು” ಎಂದು ಹೇಳಿ ಕಳುಹಿಸಿದನು.


ಎಲೀಷನು ಸತ್ತ ಹುಡುಗನಿಗೆ ಜೀವದಾನಮಾಡಿದ ಸಂಗತಿಯನ್ನು ಗೇಹಜಿಯು ಅರಸನಿಗೆ ವಿವರಿಸುತ್ತಿರುವಾಗಲೇ ಜೀವದಾನಹೊಂದಿದ ಹುಡುಗನ ತಾಯಿಯು ತನ್ನ ಹೊಲಮನೆಗಳಿಗಾಗಿ ಮೊರೆಯಿಡುವುದಕ್ಕೋಸ್ಕರ ಅರಸನ ಬಳಿಗೆ ಬಂದಳು. ಕೂಡಲೇ ಗೇಹಜಿಯು, “ನನ್ನ ಒಡೆಯನೇ, ಎಲೀಷನು ಬದುಕಿಸಿದ ಹುಡುಗನು ಇವನೇ; ಈಕೆಯು ಇವನ ತಾಯಿ” ಎಂದು ಹೇಳಿದನು.


ಒಮ್ಮೆ ಎಲೀಷನು ದಮಸ್ಕಕ್ಕೆ ಹೋದನು. ಆಗ ಅರಾಮ್ಯರ ಅರಸನಾದ ಬೆನ್ಹದದನು ಅಸ್ವಸ್ಥನಾಗಿದ್ದನು. “ದೇವರ ಮನುಷ್ಯನು ಬಂದಿದ್ದಾನೆ” ಎಂಬ ವರ್ತಮಾನವನ್ನು ಅರಸನು ಕೇಳಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು