2 ಅರಸುಗಳು 8:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಏಳು ವರ್ಷಗಳಾದ ನಂತರ ಆಕೆಯು ಫಿಲಿಷ್ಟಿಯರ ದೇಶದಿಂದ ಸ್ವದೇಶಕ್ಕೆ ಬಂದು, ಪರಾಧೀನವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡುವುದಕ್ಕೋಸ್ಕರ ಅರಸನ ಬಳಿಗೆ ಹೋದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಏಳು ವರ್ಷಗಳಾದನಂತರ ಆಕೆ ಅಲ್ಲಿಂದ ಸ್ವಂತ ನಾಡಿಗೆ ಬಂದು, ಪರರ ಕೈವಶವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡಲು ಅರಸನ ಬಳಿಗೆ ಬಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಏಳು ವರುಷಗಳಾದನಂತರ ಆಕೆಯು ಅಲ್ಲಿಂದ ಸ್ವದೇಶಕ್ಕೆ ಬಂದು ಪರಾಧೀನವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡುವದಕ್ಕೋಸ್ಕರ ಅರಸನ ಬಳಿಗೆ ಹೋದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಏಳು ವರ್ಷಗಳು ಮುಗಿದ ನಂತರ ಆ ಸ್ತ್ರೀಯು ಫಿಲಿಷ್ಟಿಯರ ದೇಶದಿಂದ ಹಿಂದಿರುಗಿ ಬಂದಳು. ಆ ಸ್ತ್ರೀಯು ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಮತ್ತೆ ಕೊಡಿಸುವಂತೆ ಕೇಳಲು ರಾಜನ ಬಳಿಗೆ ಹೋದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಏಳು ವರ್ಷ ಆದ ತರುವಾಯ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರುಗಿಬಂದು ತನ್ನ ಹೊಲಮನೆಗಳಿಗೋಸ್ಕರ ಅರಸನಿಗೆ ಮೊರೆಯಿಟ್ಟಳು. ಅಧ್ಯಾಯವನ್ನು ನೋಡಿ |
ಅರಸನು ಈ ವಿಷಯವಾಗಿ ಆ ಸ್ತ್ರೀಯನ್ನು ವಿಚಾರಿಸಲು ಆಕೆಯು ಅದರಂತೆಯೇ ಎಲೀಷನಿಂದಾದ ದೇವರ ಮಹಿಮೆಯ ವಿಷಯವನ್ನು ವಿವರವಾಗಿ ತಿಳಿಸಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಈಕೆಯ ಹೊಲಮನೆಗಳನ್ನೂ, ಈಕೆಯು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಅವಳಿಗೆ ಕೊಡಿಸು” ಎಂದು ಆಜ್ಞಾಪಿಸಿ, ಅವನನ್ನು ಆಕೆಯ ಜೊತೆಯಲ್ಲಿ ಕಳುಹಿಸಿದನು.