2 ಅರಸುಗಳು 8:1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಯೆಹೋವನು ಈ ದೇಶಕ್ಕೆ ಏಳು ವರ್ಷಗಳ ಕಾಲ ಕ್ಷಾಮವನ್ನು ಬರಮಾಡುವುದಕ್ಕಿದ್ದಾನೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಸರ್ವೇಶ್ವರಸ್ವಾಮಿ ಈ ನಾಡಿಗೆ ಏಳು ವರ್ಷಗಳ ಬರಗಾಲವನ್ನು ಕಳುಹಿಸಲಿದ್ದಾರೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು,” ಎಂದು ಭವಿಷ್ಯ ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ - ಯೆಹೋವನು ಈ ದೇಶಕ್ಕೆ ಏಳು ವರುಷಗಳ ಬರವನ್ನು ಕಳುಹಿಸುವದಕ್ಕಿರುತ್ತಾನೆ. ಆದದರಿಂದ ನೀನು ನಿನ್ನ ಮನೆಯವರೊಡನೆ ಯಾವದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಎಲೀಷನು ತಾನು ಮರಳಿ ಜೀವಿಸುವಂತೆ ಮಾಡಿದ ಬಾಲಕನ ತಾಯಿಯೊಂದಿಗೆ ಮಾತನಾಡಿದನು. ಎಲೀಷನು, “ನೀನು ಮತ್ತು ನಿನ್ನ ಕುಟುಂಬವು ಬೇರೆ ದೇಶಕ್ಕೆ ಹೋಗಬೇಕು. ಏಕೆಂದರೆ ಈ ದೇಶದಲ್ಲಿ ಬರಗಾಲವು ಏಳು ವರ್ಷಗಳವರೆಗೆ ಇರಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ನೀನು, ನಿನ್ನ ಮನೆಯವರು ಎದ್ದು ಎಲ್ಲಿ ಇಳಿದುಕೊಳ್ಳುವ ಸ್ಥಳ ಉಂಟೋ ಅಲ್ಲಿ ಹೋಗಿ ವಾಸಿಸಿರಿ. ಏಕೆಂದರೆ ಯೆಹೋವ ದೇವರು ಬರವನ್ನು ಕಳುಹಿಸಲಿದ್ದಾರೆ. ಅದು ದೇಶದ ಮೇಲೆ ಏಳು ವರ್ಷದವರೆಗೂ ಬರುವುದು,” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |