2 ಅರಸುಗಳು 7:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ, ಇದು ಸಂಭವಿಸಲು ಸಾಧ್ಯವಿಲ್ಲ?” ಎಂದು ಹೇಳಿದ್ದನು. ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ನೀನು, ಅದನ್ನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವುದಿಲ್ಲ” ಎಂದು ನುಡಿದಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಆ ಸರದಾರನು, “ಸರ್ವೇಶ್ವರ ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು,” ಎಂದದ್ದರಿಂದ ದೈವಪುರುಷನು ಅವನಿಗೆ, “ನೀನು ಅದನ್ನು ಕಣ್ಣಾರೆ ಕಾಣುವೆ; ಆದರೆ ಅದನ್ನು ಅನುಭವಿಸಲಾರೆ,” ಎಂದು ನುಡಿದಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಯೆಹೋವನು ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು ಅಂದದರಿಂದ ದೇವರ ಮನುಷ್ಯನು ಅವನಿಗೆ - ನೀನು ಅದನ್ನು ಕಣ್ಣಾರೆ ಕಾಣುವಿ; ಆದರೆ ಅನುಭವಿಸುವದಿಲ್ಲ ಎಂದು ನುಡಿದಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಆದರೆ ಆ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಿಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು. ಎಲೀಷನು ಆ ಅಧಿಕಾರಿಗೆ, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದು ಹೇಳಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಆ ಅಧಿಕಾರಿ ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ, ಸಂಭವಿಸುವುದೋ?” ಎಂದು ನುಡಿದಿದ್ದನು. ಅದಕ್ಕವನು, “ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವೆ, ಆದರೆ ನೀನು ಅದನ್ನು ತಿನ್ನುವುದಿಲ್ಲ,” ಎಂದು ಪ್ರವಾದಿಯು ಹೇಳಿದ್ದನು. ಅಧ್ಯಾಯವನ್ನು ನೋಡಿ |