2 ಅರಸುಗಳು 23:24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಇದಲ್ಲದೆ, ಯೋಷೀಯನು ಸತ್ತವರಲ್ಲಿ ವಿಚಾರಿಸುವವರನ್ನೂ, ಭೂತ ಪ್ರೇತ ಆರಾಧಕರನ್ನೂ, ಯೆರೂಸಲೇಮ್, ಯೆಹೂದ ಪ್ರಾಂತ್ಯ ಇವುಗಳಲ್ಲಿದ್ದ ಎಲ್ಲಾ ತೆರಾಫೀಮ್ ಎಂಬ ಬೊಂಬೆಗಳನ್ನೂ, ಮೂರ್ತಿಗಳನ್ನೂ ಎಲ್ಲಾ ಅಸಹ್ಯ ವಿಗ್ರಹಗಳನ್ನೂ ತೆಗೆದುಹಾಕಿ ಯಾಜಕನಾದ ಹಿಲ್ಕೀಯನಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ಧರ್ಮೋಪದೇಶಗ್ರಂಥದಲ್ಲಿದ್ದ ಆಜ್ಞೆಗಳನ್ನು ನೆರವೇರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಇದಲ್ಲದೆ, ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನೂ ಬೈತಾಳಿಕರನ್ನೂ ಜೆರುಸಲೇಮ್, ಜುದೇಯ ಪ್ರಾಂತ್ಯಗಳಲ್ಲಿದ್ದ ಎಲ್ಲಾ ತೆರಫೀಮ್ ಎಂಬ ಮನೆದೇವರುಗಳು, ಮೂರ್ತಿಗಳು ಹಾಗು ಎಲ್ಲ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ, ಯಾಜಕ ಹಿಲ್ಕೀಯನಿಗೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ಧರ್ಮೋಪದೇಶ ಗ್ರಂಥದ ವಾಕ್ಯಗಳನ್ನು ನೆರವೇರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಇದಲ್ಲದೆ ಅವನು ಸತ್ತವರಲ್ಲಿ ವಿಚಾರಿಸುವವರನ್ನೂ ಬೈತಾಳಿಕರನ್ನೂ ಯೆರೂಸಲೇಮ್ ಯೆಹೂದಪ್ರಾಂತ ಇವುಗಳಲ್ಲಿದ್ದ ಎಲ್ಲಾ ತೆರಾಫೀಮ್ ಎಂಬ ಬೊಂಬೆಗಳನ್ನೂ ಮೂರ್ತಿಗಳನ್ನೂ ಎಲ್ಲಾ ಅಸಹ್ಯ ವಿಗ್ರಹಗಳನ್ನೂ ತೆಗೆದುಹಾಕಿ ಯಾಜಕನಾದ ಹಿಲ್ಕೀಯನಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ ಧರ್ಮೋಪದೇಶಗ್ರಂಥದ ವಾಕ್ಯಗಳನ್ನು ನೆರವೇರಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಯೋಷೀಯನು ಮಾಂತ್ರಿಕರನ್ನು, ತಾಂತ್ರಿಕರನ್ನು, ಮನೆಯ ದೇವರುಗಳನ್ನು, ವಿಗ್ರಹಗಳನ್ನು, ಯೆಹೂದದಲ್ಲಿ ಮತ್ತು ಜೆರುಸಲೇಮಿನಲ್ಲಿ ಜನರು ಪೂಜಿಸುತ್ತಿದ್ದ ತೆರಾಫೀಮ್ ಎಂಬ ಗೊಂಬೆಗಳನ್ನು ನಾಶಪಡಿಸಿದನು. ಯಾಜಕನಾದ ಹಿಲ್ಕೀಯನಿಗೆ ದೇವಾಲಯದಲ್ಲಿ ಸಿಕ್ಕಿದ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳಿಗೆ ವಿಧೇಯನಾಗಿರಲು ಯೋಷೀಯನು ಹೀಗೆ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಇದಲ್ಲದೆ ಯಾಜಕನಾದ ಹಿಲ್ಕೀಯನು ಯೆಹೋವ ದೇವರ ಆಲಯದಲ್ಲಿ ಕಂಡುಕೊಂಡ ಗ್ರಂಥದಲ್ಲಿ ಬರೆದಿದ್ದ ನಿಯಮದ ಮಾತುಗಳನ್ನು ಯೋಷೀಯನು ಈಡೇರಿಸುವಂತೆ ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನಲ್ಲಿಯೂ ಭೂತಪ್ರೇತಗಳನ್ನು ವಿಚಾರಿಸುವವರನ್ನೂ, ಮಂತ್ರಗಾರರನ್ನೂ, ಮನೆದೇವರುಗಳನ್ನೂ, ವಿಗ್ರಹಗಳನ್ನೂ, ಸಮಸ್ತ ಅಸಹ್ಯಕರವಾದವುಗಳನ್ನೂ ತೆಗೆದುಹಾಕಿಬಿಟ್ಟನು. ಅಧ್ಯಾಯವನ್ನು ನೋಡಿ |