2 ಅರಸುಗಳು 23:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೆನ್ ಹಿನ್ನೋಮ್ ತಗ್ಗಿನಲ್ಲಿದ್ದ “ತೋಫೆತ್” ಎಂಬ ಯಜ್ಞವೇದಿಯ ಸ್ಥಳವನ್ನು ಹೊಲೆಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ತಮ್ಮ ಗಂಡುಹೆಣ್ಣುಮಕ್ಕಳನ್ನು ಯಾರೂ ಮೋಲೆಕನಿಗಾಗಿ ಬಲಿಯಗ್ನಿಪರೀಕ್ಷೆಗೆ ಈಡುಮಾಡದಂತೆ ಬೆನ್ಹಿನ್ನೋಮ್ ಕಣಿವೆಯಲ್ಲಿದ್ದ ತೋಫೆತ್ ಎಂಬ ಸ್ಥಳವನ್ನು ಹೊಲೆಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ತಮ್ಮ ಗಂಡುಹೆಣ್ಣು ಮಕ್ಕಳನ್ನು ಯಾರೂ ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೇನ್‍ಹಿನ್ನೋಮ್ ತಗ್ಗಿನಲ್ಲಿದ್ದ ತೋಫೆತ್ ಎಂಬ ಸ್ಥಳವನ್ನು ಹೊಲೆಮಾಡಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ತೋಫೆತ್ ಎನ್ನುವುದು ಬೆನ್‌ಹಿನ್ನೋಮ್‌ನ ಮಗನಿಗೆ ಸೇರಿದ ಒಂದು ಕಣಿವೆ. ಅಲ್ಲಿ ಸುಳ್ಳುದೇವರಾದ ಮೋಲೆಕನ ಗೌರವಾರ್ಥವಾಗಿ ಜನರು ತಮ್ಮ ಮಕ್ಕಳನ್ನು ಆಹುತಿ ಕೊಡುತ್ತಿದ್ದರು ಮತ್ತು ಯಜ್ಞವೇದಿಕೆಯ ಮೇಲೆ ಸುಡುತ್ತಿದ್ದರು. ಯೋಷೀಯನು, ಜನರು ಮತ್ತೆ ಆ ಸ್ಥಳವನ್ನು ಉಪಯೋಗಿಸದಂತೆ ನಾಶಗೊಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಯಾವನೂ ತನ್ನ ಮಗನನ್ನಾದರೂ, ಮಗಳನ್ನಾದರೂ ಮೋಲೆಕನಿಗೋಸ್ಕರ ಬೆಂಕಿಯಲ್ಲಿ ಬಲಿ ಅರ್ಪಿಸದಂತೆ ಹಿನ್ನೋಮ್ ತಗ್ಗಿನಲ್ಲಿದ್ದ ತೋಫೆತನ್ನು ಅಶುದ್ಧ ಮಾಡಿದನು. ಅಧ್ಯಾಯವನ್ನು ನೋಡಿ |