2 ಅರಸುಗಳು 12:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಯೆಹೋವನ ಆಲಯದ ಪೆಟ್ಟಿಗೆಯಲ್ಲಿ ಬೇಕಾದಷ್ಟು ಹಣ ಇದೆಯೆಂದು ಕಂಡು ಬಂದಾಗೆಲ್ಲಾ, ರಾಜಲೇಖಕನೂ, ಮಹಾಯಾಜಕನೂ ಬಂದು ಅದನ್ನು ಎಣಿಸಿ ಚೀಲಗಳಲ್ಲಿ ಕಟ್ಟಿ ಇಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡುಬಂದಾಗೆಲ್ಲಾ, ರಾಜಲೇಖಕನು ಹಾಗು ಮಹಾಯಾಜಕನು ಬಂದು ಅದನ್ನು ಚೀಲಗಳಲ್ಲಿ ಹಾಕಿ, ತೂಕಮಾಡಿ, ಸರ್ವೇಶ್ವರನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡು ಬಂದಾಗೆಲ್ಲಾ ರಾಜಲೇಖಕನೂ ಮಹಾಯಾಜಕನೂ ಬಂದು ಅದನ್ನು ಚೀಲಗಳಲ್ಲಿ ಹಾಕಿ ತೂಕಮಾಡಿ ಯೆಹೋವನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಜನರು ದೇವಾಲಯಕ್ಕೆ ಹೋದಾಗ ಆ ಪೆಟ್ಟಿಗೆಯಲ್ಲಿ ಹಣವನ್ನು ಹಾಕಲಾರಂಭಿಸಿದರು. ರಾಜನ ಕಾರ್ಯದರ್ಶಿಯಾಗಲಿ ಪ್ರಧಾನಯಾಜಕನಾಗಲಿ ನೋಡಿದಾಗ ಸಾಕಷ್ಟು ಹಣವು ತುಂಬಿದ್ದರೆ ಅದನ್ನು ಲೆಕ್ಕಹಾಕಿ ಚೀಲಗಳಲ್ಲಿ ತುಂಬಿಡುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಪೆಟ್ಟಿಗೆಯಲ್ಲಿ ಬಹಳ ಹಣ ಉಂಟೆಂದು ಅವರು ಕಂಡಾಗಲೆಲ್ಲಾ ಅರಸನ ಲೇಖಕನೂ, ಮಹಾಯಾಜಕನೂ ಬಂದು, ಯೆಹೋವ ದೇವರ ಆಲಯದಲ್ಲಿ ತಂದಿದ್ದ ಹಣವನ್ನು ಎಣಿಸಿ, ಚೀಲಗಳಲ್ಲಿ ಹಾಕಿದರು. ಅಧ್ಯಾಯವನ್ನು ನೋಡಿ |