2 ಅರಸುಗಳು 10:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಯೇಹುವು ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ, ಬಾಳ್ ದೇವತೆಯನ್ನು ಸೇವಿಸುವ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಸೇರಿ ಬರಬೇಕೆಂದು ಪ್ರಕಟಿಸಿದನು. ಅವನು ಎಲ್ಲಾ ಕಡೆಗಳಿಗೂ ದೂತರನ್ನು ಕಳುಹಿಸಿದ್ದರಿಂದ ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಎಲ್ಲರೂ ಸೇರಿ ಬಂದಿದ್ದರು. ಬಾಳ್ ದೇವತೆಯ ದೇವಸ್ಥಾನವು ಪೂರ್ಣವಾಗಿ ಅವನ ಪೂಜಾರಿಗಳಿಂದ, ಭಕ್ತರಿಂದ ತುಂಬಿಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಆಗ ಬಾಳ್ ದೇವತೆಯ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಕೂಡಿಬಂದುದರಿಂದ ಬಾಳನ ದೇವಸ್ಥಾನ ಸಂಪೂರ್ಣವಾಗಿ ತುಂಬಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಆಗ ಬಾಳನ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಕೂಡಿ ಬಂದದರಿಂದ ಬಾಳನ ದೇವಸ್ಥಾನವೂ ಪೂರ್ಣವಾಗಿ ತುಂಬಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಬಳಿಕ ಅವನು ಇಸ್ರೇಲಿನ ಪ್ರದೇಶದಲ್ಲೆಲ್ಲಾ ಒಂದು ಸಂದೇಶವನ್ನು ಕಳುಹಿಸಿದನು. ಬಾಳನ ಆರಾಧಕರೆಲ್ಲರೂ ಬಂದರು. ಮನೆಯಲ್ಲಿ ಯಾರೂ ಉಳಿಯಲಿಲ್ಲ. ಬಾಳನ ಆರಾಧಕರೆಲ್ಲ ಬಾಳನ ಆಲಯಕ್ಕೆ ಬಂದರು. ಜನರಿಂದ ಆಲಯವು ತುಂಬಿಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ, ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಾಳನ ದೇವಸ್ಥಾನ ಪೂರ್ಣವಾಗಿ ತುಂಬಿತ್ತು. ಅಧ್ಯಾಯವನ್ನು ನೋಡಿ |