Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 9:2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಈ ಸೌಲನು ಯೌವನಸ್ಥನೂ, ಎಲ್ಲಾ ಇಸ್ರಾಯೇಲ್ಯರಲ್ಲಿ ಅತಿಸುಂದರನೂ ಆಗಿದ್ದನು. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಇವನಿಗೆ ಸೌಲನೆಂಬ ಒಬ್ಬ ಮಗನಿದ್ದನು. ಈ ಸೌಲನು ಉತ್ತಮನೂ ಇಸ್ರಯೇಲರಲ್ಲೆಲ್ಲ ಅತಿಸುಂದರನೂ ಆಗಿದ್ದನು; ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರ ಆಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇವನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಈ ಸೌಲನು ಉತ್ತಮನೂ ಎಲ್ಲಾ ಇಸ್ರಾಯೇಲ್ಯರಲ್ಲಿ ಅತಿ ಸುಂದರನೂ ಆಗಿದ್ದನು; ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಉನ್ನತವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಸೌಲನು ಸುಂದರನಾದ ಯುವಕನಾಗಿದ್ದನು. ಸೌಲನಿಗಿಂತ ಸುಂದರರು ಅಲ್ಲಿರಲಿಲ್ಲ. ಸೌಲನು ಇತರ ಇಸ್ರೇಲ್ ಗಂಡಸರಿಗಿಂತ ಎತ್ತರವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅವನಿಗೆ ಒಳ್ಳೆಯ ಪ್ರಾಯಸ್ಥನಾದ ಸೌಲನೆಂಬ ಹೆಸರುಳ್ಳ ಒಬ್ಬ ಒಳ್ಳೆಯ ಮಗನಿದ್ದನು. ಇಸ್ರಾಯೇಲರಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನಾದರೂ ಇರಲಿಲ್ಲ. ಅವನ ಭುಜವು ಜನರ ಮಧ್ಯೆ ಕಾಣುವಷ್ಟು ಎತ್ತರವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 9:2
10 ತಿಳಿವುಗಳ ಹೋಲಿಕೆ  

ಆದರೆ ಯೆಹೋವನು ಸಮುವೇಲನಿಗೆ, “ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು.


ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆ ಎಂದು ತಿಳಿದುಕೊಂಡೆವು. ಅವರಿಗೂ ನಾವು ಹಾಗೆಯೇ ಕಾಣಿಸಿದೆವು” ಎಂದು ಹೇಳಿದರು.


ಸೌಂದರ್ಯವುಳ್ಳವರಾಗಿರುವುದನ್ನು ನೋಡಿ ದೇವಪುತ್ರರು ತಮಗೆ ಇಷ್ಟವಾದವರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು.


ಯೆಹೋವನು ಹೀಗೆನ್ನುತ್ತಾನೆ, “ಜ್ಞಾನಿಯು ತನ್ನ ಜ್ಞಾನಕ್ಕೆ, ಪರಾಕ್ರಮಿಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ.


ಫಿಲಿಷ್ಟಿಯರ ಪಾಳೆಯದಿಂದ ಗತ್ ಊರಿನವನಾದ ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.


ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ತಪ್ಪಿಸಿಕೊಂಡು ಹೋದುದರಿಂದ ಅವನು ತನ್ನ ಮಗನಾದ ಸೌಲನಿಗೆ, “ನೀನೆದ್ದು ಆಳುಗಳಲ್ಲಿ ಒಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕುವುದಕ್ಕೆ ಹೋಗು” ಎಂದು ಹೇಳಿದನು.


ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟುಬಿದ್ದಿತು. ಆದರೆ ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.


ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ ಇವರನ್ನು ಪಡೆದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು