1 ಸಮುಯೇಲ 17:26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ದಾವೀದನು, “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವುದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಏನು ಸಿಕ್ಕುವುದು ಹೇಳಿರಿ” ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಿದನು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಆಗ ದಾವೀದನು ತನ್ನ ಬಳಿಯಲ್ಲೆ ನಿಂತಿದ್ದವರನ್ನು ನೋಡಿ, “ಜೀವಸ್ವರೂಪರಾದ ದೇವರ ಸೈನ್ಯವನ್ನು ಹೀಗೆ ಹಿಯ್ಯಾಳಿಸುವ, ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಯೇಲರಿಗೆ ಬಂದಿರುವ ನಿಂದೆ ಅವಮಾನವನ್ನು ನೀಗಿಸುವವನಿಗೆ ಏನು ಸಿಕ್ಕುವುದೆಂದು ಹೇಳಿದಿರಿ?” ಎಂದು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ದಾವೀದನು - ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಸಿಕ್ಕುವದೇನೆಂದು ಹೇಳಿದಿರಿ ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಲು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ದಾವೀದನು ತನ್ನ ಹತ್ತಿರ ನಿಂತಿದ್ದವನಿಗೆ, “ಈ ಫಿಲಿಷ್ಟಿಯನನ್ನು ಕೊಂದು ಇಸ್ರೇಲರಿಗೆ ಉಂಟಾಗಿರುವ ಅಪನಿಂದೆಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನ್ಯಾರು? ಇವನು ಕೇವಲ ಒಬ್ಬ ಪರದೇಶಿ. ಗೊಲ್ಯಾತನು ಫಿಲಿಷ್ಟಿಯನೇ ಹೊರತು ಬೇರೆ ಯಾರೂ ಅಲ್ಲ. ಜೀವಸ್ವರೂಪನಾದ ದೇವರ ಸೈನ್ಯದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿಕೊಂಡಿದ್ದಾನೆ?” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ, “ಈ ಫಿಲಿಷ್ಟಿಯನನ್ನು ಕೊಂದು, ಇಸ್ರಾಯೇಲಿನ ಮೇಲಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಸಿಕ್ಕುವುದು? ಏಕೆಂದರೆ ಸುನ್ನತಿ ಇಲ್ಲದ ಆ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸುವುದಕ್ಕೆ ಎಷ್ಟರವನು,” ಎಂದನು. ಅಧ್ಯಾಯವನ್ನು ನೋಡಿ |
ಜೀವಸ್ವರೂಪನಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನನಾದ ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದನೆಯ ಮಾತುಗಳನ್ನು, ನಿನ್ನ ದೇವರಾದ ಯೆಹೋವನು ಕೇಳಿರುವನು. ನಿನ್ನ ದೇವರಾದ ಯೆಹೋವನು ತಾನು ಹೇಳಿದ ಮಾತುಗಳ ನಿಮಿತ್ತ ಮುಯ್ಯಿತೀರಿಸುವನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗಾಗಿಯಾದರೂ ಆತನನ್ನು ಪ್ರಾರ್ಥಿಸು ಎಂಬುದಾಗಿ ಹಿಜ್ಕೀಯನು ಹೇಳುತ್ತಾನೆ” ಎಂದು ಹೇಳಿರಿ ಅಂದನು.
ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಮುಂದೆ ತಂದರಲ್ಲಾ; ನೀನು ನಿನ್ನ ರಾಜ್ಯದ ಮುಖಂಡರ, ಪತ್ನಿ ಹಾಗೂ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ, ಕಣ್ಣು, ಕಿವಿ ಇಲ್ಲದ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ, ಕಲ್ಲುಗಳ ದೇವರುಗಳನ್ನು ಸ್ತುತಿಸಿದ್ದೀ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ, ನಿನ್ನ ಸ್ಥಿತಿಗತಿಗಳು ಯಾರ ಅಧೀನವೋ ಆ ದೇವರನ್ನು ಘನಪಡಿಸಲೇ ಇಲ್ಲ.