Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 17:22 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ದಾವೀದನು ತಾನು ತಂದವುಗಳನ್ನು ಸಾಮಾನು ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ ಅವರೊಡನೆ ಮಾತನಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅಷ್ಟರಲ್ಲಿ ದಾವೀದನು ತಾನು ತಂದವುಗಳನ್ನೂ ಆಹಾರಪದಾರ್ಥಗಳನ್ನೂ ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿದನು. ತನ್ನ ಸಹೋದರರ ಯೋಗಕ್ಷೇಮ ವಿಚಾರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ದಾವೀದನು ತಾನು ತಂದವುಗಳನ್ನು ಸಾಮಾನುಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆಗ ದಾವೀದನು ತಾನು ತೆಗೆದುಕೊಂಡು ಬಂದದ್ದನ್ನು, ವಸ್ತುಗಳನ್ನು ಕಾಯುವವನ ಕೈಯಲ್ಲಿ ಇಟ್ಟುಬಿಟ್ಟು, ರಣರಂಗಕ್ಕೆ ಓಡಿಹೋಗಿ, ತನ್ನ ಸಹೋದರರ ಬಳಿಗೆ ಬಂದು, ಯೋಗಕ್ಷೇಮ ವಿಚಾರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 17:22
11 ತಿಳಿವುಗಳ ಹೋಲಿಕೆ  

ಶತ್ರುಗಳು ಅಯ್ಯಾಥಿನ ಮೇಲೆ ದಂಡೆತ್ತಿ ಬಂದಿದ್ದಾರೆ, ಮಿಗ್ರೋನನ್ನು ಹಾದುಹೋಗಿದ್ದಾರೆ; ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟುಬಿಟ್ಟಿದ್ದಾರೆ.


ಈ ವಿಷಯದಲ್ಲಿ ಏನು ಮಾಡಬೇಕೆಂಬುದನ್ನು ಆಲೋಚಿಸಿರಿ” ಎಂದು ಹೇಳಿ ತಾವು ಅಲ್ಲಿಂದ ಮೀಕನ ಮನೆಯಲ್ಲಿದ್ದ ಆ ಯೌವನಸ್ಥನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸ ತೊಡಗಿದರು.


ಇಸ್ರಾಯೇಲ್ಯನು ಅವನಿಗೆ, “ನೀನು ಶೆಕೆಮಿಗೆ ಹೋಗಿ ನಿನ್ನ ಅಣ್ಣಂದಿರ ಯೋಗ ಕ್ಷೇಮವನ್ನೂ, ಆಡುಕುರಿಗಳ ಹಿಂಡಿನ ಯೋಗ ಕ್ಷೇಮವನ್ನೂ ವಿಚಾರಿಸಿಕೊಂಡು ಬಾ” ಎಂದು ಅಪ್ಪಣೆ ಕೊಟ್ಟು, ಅವನನ್ನು ಹೆಬ್ರೋನ್ ಕಣಿವೆಯಿಂದ ಕಳುಹಿಸಲು ಯೋಸೇಫನು ಹೊರಟನು.


ತರುವಾಯ ಅವರು ತಮ್ಮ ಹೆಂಡತಿ ಮಕ್ಕಳನ್ನೂ, ಕುರಿದನ ಮೊದಲಾದ ಸೊತ್ತನ್ನೂ ಮುಂದಾಗಿ ಕಳುಹಿಸಿ ತಾವು ಹಿಂದಿನಿಂದ ಹೊರಟರು.


ಇಸ್ರಾಯೇಲರು, ಫಿಲಿಷ್ಟಿಯರೂ ಎದುರೆದುರು ವ್ಯೂಹಕಟ್ಟುವಷ್ಟರಲ್ಲಿ


ಊರೀಯನು ಬಂದಾಗ ದಾವೀದನು, “ಯೋವಾಬನೂ ಮತ್ತು ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆದಿದೆ?” ಎಂದು ವಿಚಾರಿಸಿದ, ನಂತರ


ಮೋಶೆಯು ತನ್ನ ಮಾವನನ್ನು ಎದುರುಗೊಳ್ಳುವುದಕ್ಕೆ ಹೊರಟು ಆತನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಡೇರೆಯೊಳಗೆ ಹೋದರು.


ಅವನು ಹತ್ತು ಮಂದಿ ಸೇವಕರನ್ನು ಕರೆದು ಅವರಿಗೆ, “ನೀವು ಕರ್ಮೆಲಿನಲ್ಲಿರುವ ನಮ್ಮ ಸಂಬಂಧಿಕನಾದ ನಾಬಾಲನ ಬಳಿಗೆ ಹೋಗಿ ಅವನ ಕ್ಷೇಮ ಸಮಾಚಾರವನ್ನು ವಿಚಾರಿಸಿರಿ.


ಅನಂತರ ದಾವೀದನು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋಗುತ್ತಿರುವಾಗ, ಅವರು ಅವನನ್ನೂ ಅವನೊಂದಿಗಿದ್ದ ಜನರನ್ನೂ ಸಂಧಿಸಿ, ಅವರ ಕ್ಷೇಮಸಮಾಚಾರವನ್ನು ವಿಚಾರಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು