Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 14:39 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಇಸ್ರಾಯೇಲ್ಯರ ರಕ್ಷಕನಾದ ಯೆಹೋವನ ಆಣೆ, ಪಾಪಮಾಡಿದವನು ನನ್ನ ಮಗನಾದ ಯೋನಾತಾನನಾಗಿದ್ದರೂ ಸರಿಯೇ, ಅವನು ಸಾಯಲೇಬೇಕು” ಎಂದು ಹೇಳಿದನು; ಜನರು ಏನೂ ಮಾತನಾಡದೆ ಮೌನವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಇಸ್ರಯೇಲರ ರಕ್ಷಕನಾದ ಸರ್ವೇಶ್ವರನ ಆಣೆ, ಪಾಪಮಾಡಿದವರು ಯಾರೇ ಆಗಿರ಼ಲಿ, ಮಗನಾದ ಯೋನಾತಾನನಾಗಿದ್ದರೂ ಸರಿಯೇ, ಅವನು ಸಾಯಲೇಬೇಕು,” ಎಂದು ಹೇಳಿದನು. ಜನರು ಏನೂ ಮಾತಾಡದೆ ಮೌನವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಇಸ್ರಾಯೇಲ್ಯರ ರಕ್ಷಕನಾದ ಯೆಹೋವನ ಆಣೆ, ಪಾಪಮಾಡಿದವನು ನನ್ನ ಮಗನಾದ ಯೋನಾತಾನನಾಗಿದ್ದರೂ ಸರಿಯೇ ಅವನು ಸಾಯಲೇಬೇಕು ಎಂದು ಹೇಳಿದನು; ಜನರು ಏನೂ ಮಾತಾಡದೆ ಮೌನವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಇಸ್ರೇಲನ್ನು ರಕ್ಷಿಸುವ ಯೆಹೋವನಾಣೆಯಿಟ್ಟು ಹೇಳುತ್ತಿದ್ದೇನೆ, ನನ್ನ ಸ್ವಂತ ಮಗನಾದ ಯೋನಾತಾನನೇ ಈ ಪಾಪ ಮಾಡಿದ್ದರೂ ಅವನು ಸಾಯಲೇಬೇಕು” ಎಂದು ಹೇಳಿದನು. ಜನರಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಏಕೆಂದರೆ ನನ್ನ ಪುತ್ರನಾದ ಯೋನಾತಾನನಿಂದಾದರೂ ಉಂಟಾಗಿದ್ದರೆ, ಅವನು ಸತ್ತೇ ಸಾಯುವನೆಂದು ಇಸ್ರಾಯೇಲರನ್ನು ರಕ್ಷಿಸುವ ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ,” ಎಂದನು. ಆದರೆ ಸಮಸ್ತ ಜನರಲ್ಲಿ ಒಬ್ಬನಾದರೂ ಅವನಿಗೆ ಉತ್ತರ ಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 14:39
10 ತಿಳಿವುಗಳ ಹೋಲಿಕೆ  

ಇದನ್ನು ಕೇಳಿ ದಾವೀದನು ಆ ಮನುಷ್ಯನ ಮೇಲೆ ಬಹಳವಾಗಿ ಕೋಪಗೊಂಡು ನಾತಾನನಿಗೆ, “ಯೆಹೋವನ ಆಣೆ, ಆ ಮನುಷ್ಯನು ಸಾಯಲೇಬೇಕು.


ಅದಕ್ಕೆ ಸೌಲನು, “ಯೋನಾತಾನನೇ, ನಾನು ನಿನ್ನನ್ನು ಕೊಲ್ಲದೆ ಬಿಟ್ಟರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದನು.


ಆ ದಿನ ಸೌಲನು ಇಸ್ರಾಯೇಲರನ್ನು ಕುರಿತು, “ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೋಸ್ಕರ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟಿದ್ದರಿಂದ ಅಂದು ಅವರೆಲ್ಲರೂ ಬಹುವಾಗಿ ಬಳಲಿಹೋಗಿದ್ದರೂ ಒಬ್ಬನಾದರೂ ಆಹಾರ ಪಧಾರ್ಥವನ್ನು ರುಚಿಸಿ ನೋಡಿರಲಿಲ್ಲ.


ಎಲ್ಲವುಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ಮತ್ತು ದುಷ್ಟನಿಗೂ, ಒಳ್ಳೆಯವನಿಗೂ ಮತ್ತು ಕೆಟ್ಟವನಿಗೂ, ಶುದ್ಧನಿಗೂ ಮತ್ತು ಅಶುದ್ಧನಿಗೂ, ಯಜ್ಞವನ್ನು ಅರ್ಪಿಸುವವನಿಗೂ ಮತ್ತು ಅರ್ಪಿಸದವನಿಗೂ ಒಂದೇ ಗತಿಯಾಗುವುದು. ಒಳ್ಳೆಯವನು ಹೇಗೋ ಹಾಗೆಯೇ ಪಾಪಿಯೂ ಇರುವನು. ಆಣೆಯಿಡುವವನು ಹೇಗೋ ಹಾಗೆಯೇ ಆಣೆಗೆ ಭಯಪಡುವವನೂ ಇರುವನು.


ಅದಕ್ಕೆ ಸೌಲನು, “ಯೆಹೋವನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ” ಎಂದು ಆಕೆಗೆ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದನು.


ಆಗ ಅರಸನು ಅವನಿಗೆ, “ಅಹೀಮೆಲೆಕನೇ ನೀನೂ ನಿನ್ನ ಮನೆಯವರೂ ಸಾಯಲೇ ಬೇಕು” ಎಂದು ಹೇಳಿ ತನ್ನ ಬಳಿಯಲ್ಲಿದ್ದ


ಆ ಇಷಯನ ಮಗನು ಭೂಲೋಕದಲ್ಲಿರುವವರೆಗೆ ನಿನಗಾದರೂ, ನಿನ್ನ ರಾಜ್ಯಕ್ಕಾದರೂ ನೆಲೆಯಿಲ್ಲ. ಆದುದರಿಂದ ಅವನನ್ನು ಕರಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ. ಅವನು ಸಾಯಬೇಕು” ಅಂದನು.


ಸೌಲನು ಯೋನಾತಾನನ ಮಾತುಗಳನ್ನು ಲಾಲಿಸಿ, “ಯೆಹೋವನಾಣೆ, ಅವನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣಮಾಡಿದನು.


ಆಗ ಸೌಲನು ಅವರಿಗೆ, “ನೀವೆಲ್ಲರೂ ಒಂದು ಕಡೆ ನಿಲ್ಲಿರಿ; ನಾನೂ ನನ್ನ ಮಗನಾದ ಯೋನಾತಾನನೂ ಮತ್ತೊಂದು ಕಡೆಯಲ್ಲಿರುವೆವು” ಅನ್ನಲು ಅವರು, “ನಿನ್ನ ಇಷ್ಟದಂತೆ ಆಗಲಿ” ಅಂದರು.


ಅನಂತರ ಅರಸನು ಯೋವಾಬನಿಗೆ, “ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ, ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ಕರೆದುಕೊಂಡು ಬಾ” ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು