1 ಸಮುಯೇಲ 14:24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಆ ದಿನ ಸೌಲನು ಇಸ್ರಾಯೇಲರನ್ನು ಕುರಿತು, “ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೋಸ್ಕರ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟಿದ್ದರಿಂದ ಅಂದು ಅವರೆಲ್ಲರೂ ಬಹುವಾಗಿ ಬಳಲಿಹೋಗಿದ್ದರೂ ಒಬ್ಬನಾದರೂ ಆಹಾರ ಪಧಾರ್ಥವನ್ನು ರುಚಿಸಿ ನೋಡಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಆ ದಿವಸ ಸೌಲನು ಇಸ್ರಯೇಲರಿಗೆ, “ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕಾಗಿ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತ,” ಎಂದು ಆಣೆಯಿಟ್ಟಿದ್ದರಿಂದ ಅಂದು ಅವರೆಲ್ಲರೂ ಬಹಳವಾಗಿ ಬಳಲಿಹೋಗಿದ್ದರು. ಒಬ್ಬನಾದರೂ ಆಹಾರಪದಾರ್ಥವನ್ನು ರುಚಿಸಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಆ ದಿವಸ ಸೌಲನು ಇಸ್ರಾಯೇಲ್ಯರನ್ನು ಕುರಿತು - ಶತ್ರುಗಳಿಗೆ ಮುಯ್ಯಿ ತೀರಿಸುವದಕ್ಕೋಸ್ಕರ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತನಾಗಲಿ ಎಂದು ಆಣೆಯಿಟ್ಟಿದ್ದದರಿಂದ ಅಂದು ಅವರೆಲ್ಲರೂ ಬಹುವಾಗಿ ಬಳಲಿಹೋಗಿದ್ದರು. ಒಬ್ಬನಾದರೂ ಆಹಾರ ಪದಾರ್ಥವನ್ನು ರುಚಿನೋಡಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಆದರೆ ಸೌಲನು ಆ ದಿನ ಮತ್ತೊಂದು ದೊಡ್ಡ ತಪ್ಪನ್ನು ಮಾಡಿದನು. ಇಸ್ರೇಲರು ಬಳಲಿದ್ದರು ಮತ್ತು ಹಸಿದಿದ್ದರು. ಸೌಲನು ಅವರಿಗೆ, “ನಾನು ಶತ್ರುಗಳನ್ನು ಸೋಲಿಸಬೇಕಾಗಿರುವುದರಿಂದ ನಿಮ್ಮಲ್ಲಿ ಸಾಯಂಕಾಲದೊಳಗೆ ಊಟಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟು ಹೇಳಿದ್ದರಿಂದ ಇಸ್ರೇಲಿನ ಯಾವ ಸೈನಿಕನೂ ಊಟಮಾಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಇಸ್ರಾಯೇಲರು ಆ ದಿವಸ ಬಹಳ ಬಳಲಿ ಹೋದರು. ಏಕೆಂದರೆ ಸೌಲನು, “ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾಲದವರೆಗೆ ಯಾವನು ಆಹಾರ ತಿನ್ನುತ್ತಾನೋ, ಅವನು ಶಾಪಗ್ರಸ್ತನಾಗಲಿ,” ಎಂದು ಆಣೆ ಇಟ್ಟದ್ದರಿಂದ, ಜನರೆಲ್ಲರು ಆಹಾರದ ರುಚಿ ನೋಡದೆ ಇದ್ದರು. ಅಧ್ಯಾಯವನ್ನು ನೋಡಿ |