1 ಸಮುಯೇಲ 1:7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅವರು ಪ್ರತಿವರ್ಷವೂ ಕುಟುಂಬವಾಗಿ ಯೆಹೋವನ ಮಂದಿರಕ್ಕೆ ಹೋದಾಗೆಲ್ಲಾ ಪೆನಿನ್ನಳು ಆಕೆಯನ್ನು ಕೆಣಕುತ್ತಿದ್ದುದರಿಂದ ಹನ್ನಳು ಊಟ ಮಾಡದೆ ಅಳುತ್ತಾ ಇದ್ದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ವರ್ಷ ವರ್ಷವೂ ಇದು ಹಾಗೆಯೆ ನಡೆಯುತ್ತಿತ್ತು; “ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಪ್ರತಿವರ್ಷವೂ ಯೆಹೋವನ ಮಂದಿರಕ್ಕೆ ಹೋದಾಗೆಲ್ಲಾ ಎಲ್ಕಾನನು ಹಾಗೆಯೇ ಮಾಡುತ್ತಿದ್ದದರಿಂದಲೂ ಪೆನಿನ್ನಳು ಆಕೆಯನ್ನು ರೇಗಿಸುತ್ತಿದ್ದದರಿಂದಲೂ ಹನ್ನಳು ಒಂದಾನೊಂದು ಸಾರಿ ಉಣ್ಣಲೊಲ್ಲದೆ ಅಳುತ್ತಾ ಇದ್ದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವರ ಕುಟುಂಬವು ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಒಂದು ದಿನ ಎಲ್ಕಾನನು ಯಜ್ಞವನ್ನು ಅರ್ಪಿಸುವಾಗ, ಹನ್ನಳು ನೊಂದುಕೊಂಡು ಅಳಲಾರಂಭಿಸಿದಳು. ಹನ್ನಳು ಊಟಮಾಡಲೇ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಹೀಗೆಯೇ ಅವನು ಪ್ರತಿ ಸಂವತ್ಸರದಲ್ಲಿಯೂ ಮಾಡುತ್ತಿದ್ದನು, ಇವಳು ಯೆಹೋವ ದೇವರ ಮನೆಗೆ ಹೋಗುತ್ತಿರುವಾಗ ಆ ರೀತಿಯಾಗಿ ಹನ್ನಳನ್ನು ಬಾಧಿಸುತ್ತಿದ್ದಳು. ಅದರಿಂದ ಹನ್ನಳು ಊಟಮಾಡದೆ ಅಳುತ್ತಾ ಇದ್ದಳು. ಅಧ್ಯಾಯವನ್ನು ನೋಡಿ |