1 ಯೋಹಾನನು 5:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಈತನು ಅಂದರೆ ಯೇಸು ಕ್ರಿಸ್ತನು ನೀರಿನಿಂದಲೂ, ರಕ್ತದಿಂದಲೂ ಬಂದಾತನು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ, ರಕ್ತದಿಂದಲೂ ಸಾಕ್ಷಿ ಹೊಂದಿದವನಾಗಿದ್ದಾನೆ. ಆತ್ಮವು ಸಾಕ್ಷಿಯನ್ನು ಕೊಡುತ್ತದೆ. ಏಕೆಂದರೆ ಆತ್ಮನು ಸತ್ಯಸ್ವರೂಪನೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಜಲದಿಂದ ಮಾತ್ರವಲ್ಲ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಈತನು, ಅಂದರೆ ಯೇಸು ಕ್ರಿಸ್ತನು, ನೀರಿನಿಂದಲೂ ರಕ್ತದಿಂದಲೂ ಸಾಕ್ಷಿಹೊಂದಿದವನು. ನೀರಿನಿಂದ ಮಾತ್ರವಲ್ಲ, ನೀರಿನಿಂದಲೂ ರಕ್ತದಿಂದಲೂ ಸಾಕ್ಷಿ ಹೊಂದಿದವನಾಗಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಬಂದಾತನೇ ಯೇಸು ಕ್ರಿಸ್ತನು. ಯೇಸು ನೀರಿನಿಂದ ಮಾತ್ರವಲ್ಲದೆ ರಕ್ತದಿಂದ ಬಂದನು. ಇದು ನಿಜವೆಂದು ನಮಗೆ ಆತ್ಮನು ತಿಳಿಸುತ್ತಾನೆ. ಏಕೆಂದರೆ ಆತ್ಮನು ಸತ್ಯಸ್ವರೂಪನಾಗಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಕ್ರಿಸ್ತ ಯೇಸುವೇ ನೀರಿನಿಂದಲೂ ರಕ್ತದಿಂದಲೂ ಬಂದವರು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ ರಕ್ತದಿಂದಲೂ ಬಂದರು, ಇದಕ್ಕೆ ಸಾಕ್ಷಿಕೊಡುವವರು ಪವಿತ್ರಾತ್ಮ ದೇವರೇ, ಏಕೆಂದರೆ ಪವಿತ್ರಾತ್ಮ ದೇವರು ಸತ್ಯವಾಗಿದ್ದಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ಪಾನಿಯಾನ್ ಅನಿ ರಗ್ತಾನ್ ಯೆಲ್ಲೊ ತೊಚ್ ಜೆಜು ಕ್ರಿಸ್ತ್ ಪಾನಿಯಾನ್ ಯವ್ಡೆಚ್ ನ್ಹಯ್, ಖರೆ ಪಾನಿಯಾನಬಿ ಅನಿ ರಗ್ತಾನಬಿ ಯೆಲ್ಲೊ ಹಾಯ್. ಹೆಕಾ ಪವಿತ್ರ್ ಆತ್ಮೊಚ್ ಸಾಕ್ಷಿ. ಅಧ್ಯಾಯವನ್ನು ನೋಡಿ |
ನಿತ್ಯವಾದ ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ, ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು ನಮ್ಮಲ್ಲಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ, ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು, ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು, ಲೋಕದಲ್ಲಿ ನಂಬಲ್ಪಟ್ಟನು, ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.