Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ, ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯಾಗಿದ್ದವನೂ ಆಗಿದ್ದ ಅಜರ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಯಾಕೀನ್, ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯಾಗಿದ್ದವನೂ ಆದ ಅಜರ್ಯ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅಜರ್ಯ. ಅಜರ್ಯನು ಹಿಲ್ಕೀಯನ ಮಗ; ಹಿಲ್ಕೀಯನು ಮೆಷುಲ್ಲಾಮನ ಮಗ; ಮೆಷುಲ್ಲಾಮನು ಚಾದೋಕನ ಮಗ; ಚಾದೋಕನು ಮೆರಾಯೋತನ ಮಗ; ಮೆರಾಯೋತನು ಅಹೀಟೂಬನ ಮಗ. ಅಹೀಟೂಬನು ದೇವಾಲಯದ ಒಬ್ಬ ವಿಶೇಷ ಅಧಿಕಾರಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:11
17 ತಿಳಿವುಗಳ ಹೋಲಿಕೆ  

ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ, ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ, ದೇವಾಲಯದ ಅಧಿಪತಿಯೂ ಆದ ಸೆರಾಯ ಇವರು.


ಆಗ ಸೈನ್ಯದ ಅಧಿಕಾರಿಯು ಓಲೇಕಾರರ ಸಂಗಡ ಹೋಗಿ ಅವರನ್ನು ಕರೆದುಕೊಂಡು ಬಂದನು. ಆದರೆ ತಮಗೆ ಜನರು ಕಲ್ಲೆಸೆದಾರೆಂದು ಹೆದರಿ ಅವರನ್ನು ಹಿಂಸಿಸಲಿಲ್ಲ.


ದೇವಾಲಯದ ಅಧಿಪತಿಯೂ, ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತೋ ಎಂದು ಕಳವಳಗೊಂಡರು.


ಯೆರೆಮೀಯನು ಈ ಪ್ರವಾದನೆ ಮಾಡುವುದನ್ನು ಯಾಜಕನಾದ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿದನು.


ಸೆರಾಯ, ಅಜರ್ಯ, ಯೆರೆಮೀಯ,


ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳು, ದೈವಿಕ ಕಾರ್ಯಗಳ ಅಧ್ಯಕ್ಷರೂ ಇರುವುದರಿಂದ ಉಭಯ ಸಂತಾನದವರು ಸಮಾನ ಸ್ಥಾನದವರಾಗಿದ್ದರು.


ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡು ಹೋಗಿದ್ದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ಯಾಜಕನಾದ ಚೆಫನ್ಯನು ಮೂರು ಮಂದಿ ದ್ವಾರಪಾಲಕರು,


ತರುವಾಯ ಅರಸನು ಮಹಾಯಾಜಕನಾದ ಹಿಲ್ಕೀಯನಿಗೆ, ಅವನ ಕೈಕೆಳಗಿರುವ ಯಾಜಕರ ಮತ್ತು ದ್ವಾರಪಾಲಕರ ಮುಖಾಂತರವಾಗಿ ಬಾಳ್, ಅಶೇರ್ ಎಂಬ ದೇವತೆಗಳಿಗಾಗಿಯೂ, ಆಕಾಶಸೈನ್ಯಗಳಿಗಾಗಿಯೂ, ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಬಯಲಿನಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಬೇತೇಲಿಗೆ ಕಳುಹಿಸಿದನು.


ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರ ಗೋತ್ರಕುಟುಂಬದವರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗನಾದ ಈತಾಮಾರನ ಅಧೀನದಲ್ಲಿದ್ದು ಕಾರ್ಯಗಳನ್ನು ಮಾಡಬೇಕು” ಎಂದನು.


ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರ ಗೋತ್ರಕುಟುಂಬದವರು ಮಾಡಬೇಕಾದ ಕೆಲಸ ಇದೇ. ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಣೆ ಮಾಡಬೇಕು.


ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು.


ಅವರು ಅರಸನನ್ನು ಕೂಗಿ ಕರೆದಾಗ, ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ಅವರ ಬಳಿಗೆ ಬಂದರು.


ಯೆರೋಹಾಮನ ಮಗನಾದ ಅದಾಯ ಇವನೂ ಮತ್ತು ಇವನ ಸಹೋದರರೂ ಯೆರೋಹಾಮನು, ಪಶ್ಹೂರನ ಮಗ; ಇವನು ಮಲ್ಕೀಯನ ಮಗ, ಇವನು ಮಾಸೈಯನ ಮಗ. ಇವನು ಅದೀಯೇಲನ ಮಗ. ಇವನು ಯಹ್ಜೇರನ ಮಗ. ಇವನು ಮೆಷುಲ್ಲಾಮನ ಮಗ. ಇವನು ಮೆಷಿಲ್ಲೋಮೋತನ ಮಗ. ಇವನು ಇಮ್ಮೇರನ ಮಗ.


ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು, ಸೆರಾಯನು ಲೇಖಕನು,


ಅರಸನಾದ ಹಿಜ್ಕೀಯನ ಮತ್ತು ಯೆಹೋವನ ಆಲಯದ ಅಧಿಪತಿಯಾದ ಅಜರ್ಯನ ನಿಯಮದಂತೆ ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ ಇವರು ಕೋನನ್ಯನ ಮತ್ತು ಅವನ ತಮ್ಮನಾದ ಶಿಮ್ಮೀಯ ಕೈಕೆಳಗಿನ ಪಾರುಪತ್ಯಗಾರರಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು