Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 8:28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಇವರು ವಂಶಾವಳಿಯ ಪ್ರಕಾರ ಗೋತ್ರಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಇವರು ಜೆರುಸಲೇಮಿನಲ್ಲಿ ನೆಲೆಸಿದ ಪುರಾತನ ಕುಟುಂಬಗಳ ಮುಖ್ಯಸ್ಥರೂ ಅವರ ಪ್ರಮುಖ ವಂಶಜರೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಇವರು ವಂಶಾವಳಿಯ ಪ್ರಕಾರ ಗೋತ್ರ ಪ್ರಧಾನರೂ ಯೆರೂಸಲೇವಿುನಲ್ಲಿ ವಾಸಿಸುವವರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಈ ಜನರೆಲ್ಲರು ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರ ಗೋತ್ರ ಚರಿತ್ರೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರೆಲ್ಲಾ ಜೆರುಸಲೇಮಿನಲ್ಲಿ ವಾಸವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 8:28
11 ತಿಳಿವುಗಳ ಹೋಲಿಕೆ  

ಯೆರೂಸಲೇಮಿನಲ್ಲಿದ್ದ ಯೆಬೂಸಿಯರನ್ನು ಬೆನ್ಯಾಮೀನ್ಯರು ಹೊರಡಿಸಿಬಿಡಲಿಲ್ಲ. ಅವರು ಇಂದಿನವರೆಗೂ ಬೆನ್ಯಾಮೀನ್ಯರ ಸಂಗಡ ಯೆರೂಸಲೇಮಿನಲ್ಲಿಯೇ ವಾಸವಾಗಿದ್ದಾರೆ.


ಇಸ್ರಾಯೇಲರ ಪ್ರಮುಖರು ಮಾತ್ರ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತು ಜನರಲ್ಲಿ ಒಂಭತ್ತು ಜನ ತಮ್ಮ ತಮ್ಮ ಊರುಗಳಲ್ಲಿ ವಾಸಮಾಡುತ್ತಿದ್ದರು, ಒಬ್ಬನು ಮಾತ್ರ ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಮಾಡಬೇಕು ಎಂದು ಚೀಟು ಹಾಕಿ ಅವನನ್ನು ಗೊತ್ತು ಮಾಡುತ್ತಿದ್ದರು.


ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು ಇವೇ. ಬೆನ್ಯಾಮೀನ ಗೋತ್ರಗಳಿಗೆ ದೊರಕಿದ ಸ್ವತ್ತು ಇವೇ.


ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಯೆರೂಸಲೇಮಿನಲ್ಲೇ ವಾಸವಾಗಿದ್ದಾರೆ.


ಯಾರೆಷ್ಯ, ಏಲೀಯ ಮತ್ತು ಜಿಕ್ರೀ ಇವರು ಯೆರೋಹಾಮನ ಮಕ್ಕಳು.


ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಗೂವೇಲ್ ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ.


ಮಿಕ್ಲೋತನು ಶಿಮಾಹನನ್ನು ಪಡೆದನು. ಇವರು ತಮ್ಮ ಗೋತ್ರದ ಕುಟುಂಬದವರೊಂದಿಗೆ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು.


ಯೆಹೂದ್ಯರು, ಬೆನ್ಯಾಮೀನ್ಯರು ಎಫ್ರಾಯೀಮ್ಯರು, ಮನಸ್ಸೆಯರು ಯೆರೂಸಲೇಮಿನಲ್ಲಿ ವಾಸವಾಗಿದ್ದವರು.


ಬೆನ್ಯಾಮೀನ್ಯ ಕುಲದವರಲ್ಲಿ ಮೆಷುಲ್ಲಾಮನ ಮಗನೂ, ಹೋದವ್ಯನ ಮೊಮ್ಮಗನೂ, ಹಸ್ಸೆನುವಾಹನ ಮರಿಮಗನೂ ಆಗಿರುವ ಸಲ್ಲು ಪ್ರಮುಖನಾದವನು.


ಇವರು ವಂಶಾವಳಿಯ ಪ್ರಕಾರ ಲೇವಿಗೋತ್ರ ಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು