Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 7:22 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆದುದರಿಂದ ಇವರ ತಂದೆಯಾದ ಎಫ್ರಾಯೀಮನು ಬಹುದಿನಗಳವರೆಗೂ ದುಃಖಪಡುತ್ತಿದ್ದನು. ಅವನ ಸಹೋದರರು ಅವನನ್ನು ಸಂತೈಸುವುದಕ್ಕೋಸ್ಕರ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಇವರ ತಂದೆ ಎಫ್ರಯಿಮ್ ಅನೇಕ ದಿನಗಳವರೆಗೆ ಇವರಿಗಾಗಿ ಶೋಕಿಸಿದನು. ಅವನ ಸಹೋದರರು ಬಂದು ಅವನಿಗೆ ಸಂತಾಪ ಸೂಚಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆದದರಿಂದ ಇವರ ತಂದೆಯಾದ ಎಫ್ರಾಯೀಮನು ಬಹು ದಿನಗಳವರೆಗೂ ದುಃಖಪಡುತ್ತಿದ್ದನು. ಅವನ ಸಹೋದರರು ಅವನನ್ನು ಸಂತೈಸುವದಕ್ಕೋಸ್ಕರ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಎಜೆರನು ಮತ್ತು ಎಲ್ಲಾದನ ತಂದೆ ಎಫ್ರಾಯೀಮನು. ತನ್ನ ಮಕ್ಕಳು ಸತ್ತದ್ದಕ್ಕಾಗಿ ಬಹಳ ದಿನಗಳ ತನಕ ಅವನು ಗೋಳಾಡಿದನು. ಅವನ ಕುಟುಂಬದವರೆಲ್ಲಾ ಬಂದು ಅವನನ್ನು ಸಂತೈಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅವರ ತಂದೆಯಾದ ಎಫ್ರಾಯೀಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ, ಅವನ ಸಹೋದರರು ಅವನನ್ನು ಆದರಿಸಲು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 7:22
6 ತಿಳಿವುಗಳ ಹೋಲಿಕೆ  

ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, “ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ” ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.


ಯಾಕೋಬನು ತನ್ನ ಬಟ್ಟೆಗಳನ್ನು ಹರಿದುಕೊಂಡು ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗಾಗಿ ಬಹು ದಿನಗಳವರೆಗೂ ದುಃಖಪಟ್ಟನು.


ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು.


ತಹತನ ಮಗ ಜಾಬಾದ್, ಜಾಬಾದನ ಮಕ್ಕಳು ಶೂತೆಲಹ, ಏಜೆರ್ ಮತ್ತು ಎಲ್ಲಾದ್. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವುದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದುದರಿಂದ ಆ ದೇಶದ ಮೂಲ ನಿವಾಸಿಗಳು ಇವರನ್ನು ಕೊಂದುಹಾಕಿದರು.


ಅವನು ತನ್ನ ಹೆಂಡತಿಯನ್ನು ಸಂಗಮಿಸಲು, ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೆ ಒದಗಿದ ಆಪತ್ತಿನಲ್ಲಿ ಸಂಭವಿಸಿದ್ದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು.


ಅವನ ಗಂಡುಮಕ್ಕಳೂ ಮತ್ತು ಹೆಣ್ಣುಮಕ್ಕಳೂ ಎಲ್ಲರೂ ಅವನ ದುಃಖ ಶಮನಮಾಡುವುದಕ್ಕೆ ಪ್ರಯತ್ನಿಸಿದ್ದಾಗ್ಯೂ ಅವನು ಸಮಾಧಾನ ಆದರಣೆ ಹೊಂದಲಾರದೇ, “ನಾನು ಹೀಗೆ ದುಃಖಪಡುತ್ತಾ ನನ್ನ ಮಗನೊಂದಿಗೆ ಸಮಾಧಿ ಸೇರುವೆನು” ಎಂದನು. ಹೀಗೆ ತಂದೆಯು ಮಗನಿಗೋಸ್ಕರ ದುಃಖಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು