Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 6:33 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಹೀಗೆ ಕಾರ್ಯ ನಿರ್ವಹಿಸಿದವರ ಕುಟುಂಬಗಳ ಸರಣಿಯು ಇಂತಿದೆ: ಕೇಹತನ ಗೋತ್ರದವರು: ಪ್ರಥಮ ಸಂಗೀತಮಂಡಲಿಯ ನಾಯಕ ಯೋವೇಲನ ಮಗ ಹೇಮಾನ, ಇವನ ಹಿಂದಿನ ವಂಶಾವಳಿ ಯಕೋಬನವರೆಗೆ ಹೀಗಿದೆ: ಹೇಮಾನ, ಯೋವೇಲ, ಸಮುವೇಲ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ದೇವಾಲಯಸೇವಕರೂ ಅವರ ವಂಶಾವಳಿಯೂ - ಕೆಹಾತ್ಯನಾದ ಹೇಮಾನನು [ಮೊದಲನೆಯವನು].

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಗಾಯನದ ಮೂಲಕ ಸೇವೆಮಾಡಿದ ತಂದೆಗಳ ಮತ್ತು ಅವರ ಗಂಡುಮಕ್ಕಳ ಪಟ್ಟಿ: ಕೆಹಾತ್ಯನ ಸಂತತಿಯವರಿಂದ ಗಾಯಕನಾದ ಹೇಮಾನ. ಇವನು ಯೋವೇಲನ ಮಗ. ಯೋವೇಲನು ಸಮುವೇಲನ ಮಗ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ: ಕೊಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 6:33
17 ತಿಳಿವುಗಳ ಹೋಲಿಕೆ  

ಸಮುವೇಲನ ಮಕ್ಕಳು ಯೋವೇಲ್ ಚೊಚ್ಚಲ ಮಗನು ಮತ್ತು ಅಬೀಯನು ಎರಡನೆಯವನು.


ಆಗ ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬುವರನ್ನಲ್ಲದೆ,


ಯೆಹೋವನೇ, ನನ್ನನ್ನು ರಕ್ಷಿಸುವ ದೇವರೇ, ಹಗಲಿರುಳು ನಿನಗೆ ಮೊರೆಯಿಡುತ್ತೇನೆ.


ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ ಹಾಗು ಉಜ್ಜೀಯೇಲ್,


ಹಾಗೂ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನರೂ ಇವರ ಮಕ್ಕಳೂ, ಸಹೋದರರೂ ನಾರುಮಡಿಗಳನ್ನು ಧರಿಸಿಕೊಂಡು, ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನು ನುಡಿಸುತ್ತಾ ಯಜ್ಞವೇದಿಯ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು. ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರೂ ತುತ್ತೂರಿಗಳನ್ನು ಊದುತ್ತಾ ಇದ್ದರು.


ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಬಾರಿಸಿವವರು.


ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು” ಎಂದು ಹೇಳಿದಳು. ಆ ಮೇಲೆ ಅವರು ಶಿಲೋವಿನಲ್ಲಿ ಯೆಹೋವನನ್ನು ಆರಾಧಿಸಿದರು.


ಹನ್ನಳು ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡೆದುಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು.


ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ರಾಮಾತಯಿಮ್ ಚೋಫೀಮ್ ಊರಿನಲ್ಲಿ ಎಲ್ಕಾನನೆಂಬ ಒಬ್ಬ ಮನುಷ್ಯನಿದ್ದನು. ಇವನು ಯೆರೋಹಾಮನ ಮಗನೂ ಎಲೀಹುವಿನ ಮೊಮ್ಮಗನೂ ತೋಹುವಿನ ಮರಿಮಗನೂ ಆಗಿದ್ದನು. ತೋಹು ಎಂಬವನು ಎಫ್ರಾಯೀಮ್ಯನಾದ ಚೂಫನ ಮಗನು.


ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.


ಸಮುವೇಲನು ಎಲ್ಕಾನನ ಮಗ. ಇವನು ಯೆರೋಹಾಮನ ಮಗ, ಯೆರೋಹಾಮನು ಎಲೀಯೇಲನ ಮಗ, ಇವನು ತೋಹನ ಮಗ.


“ನೀನು ಲೇವಿಯ ಕುಲದವರನ್ನು ಹತ್ತಿರಕ್ಕೆ ಕರೆದು ಅವರು ದೇವರ ಸೇವಕಾರ್ಯಕ್ಕಾಗಿ ಯಾಜಕನಾದ ಆರೋನನ ಕೈಕೆಳಗಿರುವಂತೆ ಅವನ ಮುಂದೆ ನಿಲ್ಲಿಸು.


“ನೀನು ಲೇವಿಯರನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಒಪ್ಪಿಸಬೇಕು. ಇಸ್ರಾಯೇಲರಲ್ಲಿ ಆರೋನನಿಗೆ ಸಂಪೂರ್ಣವಾಗಿ ಒಪ್ಪಿಸಲ್ಪಟ್ಟವರು ಇವರೇ.


ಅವನು ಇಸ್ರಾಯೇಲರ ಎಲ್ಲಾ ಅಧಿಪತಿಗಳನ್ನೂ, ಯಾಜಕರನ್ನೂ ಮತ್ತು ಲೇವಿಯರನ್ನೂ ತನ್ನ ಬಳಿಯಲ್ಲಿ ಒಟ್ಟುಗೂಡಿಸಿದನು.


ದ್ವಾರಪಾಲಕರನ್ನಾಗಿ, ನಾಲ್ಕು ಸಾವಿರ ಜನರನ್ನು ಮತ್ತು ತಾನು ಸಿದ್ಧಪಡಿಸಿದ ವಾದ್ಯಗಳಿಂದ ಯೆಹೋವನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನೂ ನೇಮಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು