1 ಪೂರ್ವಕಾಲ ವೃತ್ತಾಂತ 4:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಗೌರವವುಳ್ಳವನಾಗಿದ್ದನು. ಇವನನ್ನು ಬಹು ವೇದನೆಯಿಂದ ಹೆತ್ತೆನೆಂದು ಇವನ ತಾಯಿ ಇವನಿಗೆ ಯಾಬೇಚನೆಂದು ಹೆಸರಿಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಯಾಬೇಚ್ ಎಂಬವನು ಒಬ್ಬನಿದ್ದನು. ಅವನು ತನ್ನ ಕುಟುಂಬದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ. ಅವನು ಹುಟ್ಟುವಾಗ ಪ್ರಸವವೇದನೆ ಅಧಿಕವಾಗಿದ್ದರಿಂದ ಅವನ ತಾಯಿ, ಯಾಬೇಚ ಎಂಬ ಹೆಸರನ್ನು ಅವನಿಗೆ ಕೊಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಯಾಬೇಚನು ತುಂಬ ಒಳ್ಳೆಯ ವ್ಯಕ್ತಿಯಾಗಿದ್ದನು. ಅವನು ತನ್ನ ಅಣ್ಣತಮ್ಮಂದಿರಿಗಿಂತ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದರಿಂದ ನಾನು ಅವನಿಗೆ ಯಾಬೇಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಯಾಬೇಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ, “ನಾನು ಇವನನ್ನು ವ್ಯಥೆಯಿಂದ ಹೆತ್ತೆನು,” ಎಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು. ಅಧ್ಯಾಯವನ್ನು ನೋಡಿ |