Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 4:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಗೆದೋರಿನ ಮೂಲಪುರುಷನು ಪೆನೂವೇಲನು. ಹೂಷಾಹ್ಯರ ಮೂಲಪುರುಷನು ಏಜೆರ್. ಇವರು ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು. ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಗೆದೋರಿನ ಮೂಲಪುರುಷನಾದ ಪೆನೂವೇಲ್, ಹೂಷಾಹ್ಯರ ಮೂಲಪುರುಷನಾದ ಏಜೆರ್ ಇವರೂ ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು; ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪೆನೂವೇಲನು ಗೆದೋರನ ತಂದೆ: ಏಜೆರನು ಹೂಷಾಹ್ಯನ ತಂದೆ. ಇವರು ಹೂರನ ಗಂಡುಮಕ್ಕಳು. ಹೂರನು ಎಫ್ರಾತಾಹಳ ಮೊದಲನೆಯ ಮಗನು. ಇವನೇ ಬೆತ್ಲೇಹೇಮ್ಯರ ಮೂಲಪಿತೃ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಪೆನೂಯೇಲ್, ಗೆದೋರ್ ವಂಶದವರಿಗೆ ಮೂಲಪುರುಷನಾಗಿದ್ದನು. ಏಜೆರ್ ಹೂಷಾಹರ ಮೂಲಪುರುಷನಾಗಿದ್ದನು. ಇವರು ಎಫ್ರಾತಾಹ ಎಂಬಾಕೆಯ ಚೊಚ್ಚಲಮಗನಾದ ಹೂರನ ಮಕ್ಕಳು; ಈ ಹೂರನೇ ಬೇತ್ಲೆಹೇಮ್ ವಂಶದವರಿಗೆ ಮೂಲಪುರುಷನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 4:4
10 ತಿಳಿವುಗಳ ಹೋಲಿಕೆ  

ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿಯು ಗೆದೋರ್ಯರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್ ಮತ್ತು ಜಾನೋಹದವರ ಮೂಲಪುರುಷನಾದ ಯೆಕೂತೀಯೇಲ್ ಇವರನ್ನು ಹೆತ್ತಳು.


ಕಾಲೇಬನ ಹೆಂಡತಿಯಾದ ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಕ್ಕಳು ಕಿರ್ಯತ್ಯಾರೀಮರ ಮೂಲಪುರುಷನಾದ ಶೋಬಾಲ್,


ಅವರು ತಮ್ಮ ಆಡು, ಕುರಿಗಳಿಗೋಸ್ಕರ ಹುಲ್ಲುಗಾವಲುಗಳನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ, ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ ಅಲ್ಲಿ ಶ್ರೇಷ್ಠವಾದ ಹಸಿರು ಹುಲ್ಲುಗಾವಲುಗಳನ್ನು ಕಂಡರು.


ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ಹೂರನು ಹುಟ್ಟಿದನು.


ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.


ಅದಕ್ಕೆ ಊರ ಬಾಗಿಲಲ್ಲಿ ಕೂಡಿ ಬಂದಿದ್ದ ಹಿರಿಯರೂ, ಎಲ್ಲಾ ಜನರೂ “ಹೌದು, ನಾವೇ ಸಾಕ್ಷಿಗಳು; ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ. ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಅಭಿವೃದ್ಧಿ ಹೊಂದು, ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗು.


ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಇವರು ಎಟಾಮಿನವರ ಮೂಲಪುರುಷರು. ಹಚೆಲೆಲ್‌ಪೋನೀ ಎಂಬವಳು ಇವರ ತಂಗಿ.


ತೆಕೋವದವರ ಮೂಲಪುರುಷನಾದ ಅಷ್ಹೂರನಿಗೆ ಹೆಲಾಹ ಮತ್ತು ನಾರ ಎಂಬ ಇಬ್ಬರು ಹೆಂಡತಿಯರಿದ್ದರು.


ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ ಮತ್ತು ಬೇತ್ಗಾದೇರಿನ ಮೂಲಪುರುಷನಾದ ಹಾರೇಫ್.


ಸಲ್ಮನಿಂದ ಬೇತ್ಲೆಹೇಮ್, ನೆಟೋಫಾ, ಅಟರೋತ್, ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಹುಟ್ಟಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು