Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 3:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆರೂಸಲೇಮಿನಲ್ಲಿರುವಾಗ ಅವನಿಗೆ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಮಕ್ಕಳು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅಲ್ಲಿ ಅವನಿಗೆ ಅನೇಕ ಗಂಡುಮಕ್ಕಳು ಹುಟ್ಟಿದರು. ದಾವೀದನ ಹೆಂಡತಿ ಬತ್ಷೂವ ಅಮ್ಮೀಯೇಲನ ಮಗಳು. ಆಕೆ - ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡುಮಕ್ಕಳಿಗೆ ಜನ್ಮವಿತ್ತಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಯೆರೂಸಲೇವಿುನಲ್ಲಿರುವಾಗ ಅವನಿಗೆ - ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ವರು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ದಾವೀದನಿಗೆ ಜೆರುಸಲೇಮಿನಲ್ಲಿ ಹುಟ್ಟಿದ ಮಕ್ಕಳು ಯಾರೆಂದರೆ: ಬತ್ಷೇಬಳ ನಾಲ್ಕು ಮಂದಿ ಮಕ್ಕಳು: ಶಿಮ್ಮ ಶೋಬಾಬ್, ನಾತಾನ್ ಮತ್ತು ಸೊಲೊಮೋನನು. ಬತ್ಷೇಬಳು ಅಮ್ಮೀಯೇಲನ ಮಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ದಾವೀದನ ಹೆಂಡತಿ ಬತ್ಷೆಬೆಳು ಅಮ್ಮಿಯೇಲನ ಮಗಳು. ಆಕೆಗೆ ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡು ಮಕ್ಕಳು ಜನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 3:5
11 ತಿಳಿವುಗಳ ಹೋಲಿಕೆ  

ಕೂಡಲೆ ದಾವೀದನು ಒಬ್ಬನನ್ನು ಕರೆದು, “ಆ ಸ್ತ್ರೀ ಯಾರು?” ಎಂದು ವಿಚಾರಿಸಲು ಅವನು, “ಆಕೆಯು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆ ಅಲ್ಲವೇ?” ಎಂದು ಉತ್ತರ ಕೊಟ್ಟನು.


ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು;


ಇಷಯನ ಮಗನು ಅರಸನಾದ ದಾವೀದನು. ದಾವೀದನ ಮಗನಾದ ಸೊಲೊಮೋನನು ಊರೀಯನ ಹೆಂಡತಿಯಲ್ಲಿ ಹುಟ್ಟಿದವನು.


ಆಗ ಅರಸನಾದ ಸೊಲೊಮೋನನು ತನ್ನ ತಾಯಿಗೆ, “ಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ಮಾತ್ರ ಕೇಳುವುದೇಕೆ ಅವನಿಗೆ ರಾಜ್ಯವನ್ನೂ ಕೊಡಬೇಕೆಂದು ಕೇಳು. ಅವನು ನನ್ನ ಅಣ್ಣನಲ್ಲವೇ. ಯಾಜಕನಾದ ಎಬ್ಯಾತಾರನೂ ಚೆರೂಯಳ ಮಗನಾದ ಯೋವಾಬನೂ ಅವನ ಪಕ್ಷದವರಾಗಿದ್ದಾರೆ” ಎಂದು ಉತ್ತರಕೊಟ್ಟನು.


ಇದಲ್ಲದೆ ಇಬ್ಹಾರ್, ಎಲೀಷಾಮ್, ಎಲೀಫೆಲೆಟ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು