Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 28:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಮೀಸಲು ರೊಟ್ಟಿಗಳನ್ನಿಡುವ ಬಟ್ಟಲುಗಳು ಹಾಗೂ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಮೀಸಲು ರೊಟ್ಟಿಗಳನ್ನಿಡುವ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಮೀಸಲ ರೊಟ್ಟಿಗಳನ್ನಿಡುವ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಪವಿತ್ರವಾದ ರೊಟ್ಟಿಯನ್ನು ಇಡುವ ಮೇಜನ್ನು ತಯಾರಿಸಲು ಎಷ್ಟು ಬಂಗಾರ ಬೇಕಾಗುತ್ತದೆ ಮತ್ತು ಬೆಳ್ಳಿಯಿಂದ ಮಾಡುವ ಮೇಜಿಗೆ ಎಷ್ಟು ಬೆಳ್ಳಿ ಬೇಕಾಗುತ್ತದೆ ಎಂಬುದನ್ನು ಸಹ ದಾವೀದನು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆ ಪ್ರಕಾರವೇ ಸಮ್ಮುಖದ ರೊಟ್ಟಿಗಳ ಮೇಜುಗಳಿಗೋಸ್ಕರ ಒಂದೊಂದು ಮೇಜಿಗೆ ತೂಗಿಕೊಟ್ಟನು. ಬೆಳ್ಳಿಯ ಮೇಜುಗಳಿಗೋಸ್ಕರ ಬೆಳ್ಳಿಯನ್ನು ತೂಗಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 28:16
7 ತಿಳಿವುಗಳ ಹೋಲಿಕೆ  

ಸೊಲೊಮೋನನು ಯೆಹೋವನ ದೇವಾಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಾನುಗಳು ಯಾವುದೆಂದರೆ: ಬಂಗಾರದ ಧೂಪವೇದಿ, ನೈವೇದ್ಯ ರೊಟ್ಟಿಗಳನ್ನಿಡುವ ಮೇಜುಗಳು,


ಹತ್ತು ಮೇಜುಗಳನ್ನು ಮಾಡಿಸಿ, ದೇವಾಲಯದೊಳಗೆ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.


ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವುವೆಂದರೆ - ಬಂಗಾರದ ಧೂಪವೇದಿಯು ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,


ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಬೇರೆ ಯಾರು ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ಅವನು, ಅವನ ಸಂಗಡ ಇದ್ದವರು ತಿಂದನಲ್ಲವೇ.


ಇದಲ್ಲದೆ ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲಾ ಸಾಮಾನುಗಳ ಬೆಳ್ಳಿ ಬಂಗಾರದ ತೂಕ, ಅಂದರೆ ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ,


ಚೊಕ್ಕ ಬಂಗಾರದ ಮುಳ್ಳು ಬೋಗುಣಿ, ಹೂಜಿಗಳ ಮತ್ತು ಬೆಳ್ಳಿ ಬಂಗಾರದ ಆಯಾ ಪಾತ್ರೆಗಳ ತೂಕ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು