Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 27:34 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಬೆನಾಯನ ಮಗನಾದ ಯೆಹೋಯಾದಾವನೂ, ಎಬ್ಯಾತಾರನೂ, ಅಹೀತೋಫೆಲನ ಉತ್ತರಾಧಿಕಾರಿಗಳಾದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಬೆನಾಯನ ಮಗ ಯೆಹೋಯಾದಾವನೂ ಎಬ್ಯಾತಾರನೂ ಅಹೀತೋಫೆಲನ ಉತ್ತರಾಧಿಕಾರಿಗಳು; ಯೋವಾಬನು ಅರಸನ ಸೈನ್ಯಾಧಿಪತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಬೆನಾಯನ ಮಗನಾದ ಯೆಹೋಯಾದಾವನೂ ಎಬ್ಯಾತಾರನೂ ಅಹೀತೋಫೆಲನ ಉತ್ತರಾಧಿಕಾರಿಗಳು; ಯೋವಾಬನು ಅರಸನ ಸೈನ್ಯಾಧಿಪತಿಯು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಬೆನಾಯನ ಮಗನಾದ ಯೆಹೋಯಾದವನೂ ಎಬ್ಯಾತಾರನೂ ಅಹೀತೋಫೆಲನ ತರುವಾಯ ರಾಜನ ಮಂತ್ರಾಲೋಚಕರಾದರು. ರಾಜನ ಸೈನ್ಯಕ್ಕೆ ಯೋವಾಬನು ಪ್ರಧಾನಸೇನಾಪತಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಅಹೀತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ, ಅಬಿಯಾತರನೂ ಅರಸನ ಆಲೋಚನೆಗಾರರಾಗಿದ್ದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 27:34
5 ತಿಳಿವುಗಳ ಹೋಲಿಕೆ  

ಆ ದಿನ ದಾವೀದನು ತನ್ನೊಂದಿಗೆ ಬಂದಿದ್ದ ಇಸ್ರಾಯೇಲರನ್ನು ಕುರಿತು “ಯಾರು ಯೆಬೂಸಿಯರನ್ನು ಮೊದಲು ಸೋಲಿಸುವನೋ ಅವನು ದಳಾಧಿಪತಿ ಆಗುವನು” ಎಂದು ಹೇಳಿದನು. ಚೆರೂಯಳ ಮಗನಾದ ಯೋವಾಬನು ಮೊದಲು ದಾಳಿ ಮಾಡಿದ್ದರಿಂದ ಅವನೇ ದಳಾಧಿಪತಿ ಆದನು.


ಅವನು ಚೆರೂಯಳ ಮಗನಾದ ಯೋವಾಬನನ್ನು ಮತ್ತು ಯಾಜಕನಾದ ಎಬ್ಯಾತಾರನನ್ನೂ ತನ್ನ ಕಡೆಗೆ ಒಲಿಸಿಕೊಂಡನು. ಇವರು ಅವನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾದರು.


ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕನು. ಮೂರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.


ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳ ಮುಖ್ಯಸ್ಥನು. ದಾವೀದನ ಮಕ್ಕಳು ರಾಜನ ಮುಖ್ಯಸಲಹೆಗಾರರಾಗಿದ್ದರು.


ಚೆರೂಯಳ ಮಗನಾದ ಯೋವಾಬನು ಅವನ ಸೇನಾಧಿಪತಿಯೂ, ಅಹೀಲೂದನ ಮಗನಾದ ಯೆಹೋಷಾಫಾಟನು ಮಂತ್ರಿಯೂ ಆಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು