1 ಪೂರ್ವಕಾಲ ವೃತ್ತಾಂತ 26:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಪೂರ್ವ ದಿಕ್ಕಿನ ಕಾವಲಿಗೆ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತು. ಬಹು ವಿವೇಕವುಳ್ಳ ಸಲಹೆಗಾರನಾಗಿರುವ ಅವನ ಮಗನಾದ ಜೆಕೆರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಪೂರ್ವದಿಕ್ಕಿನ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತ್ತು. ಬಹು ವಿವೇಕವುಳ್ಳ ಪಂಚಾಯತಗಾರನಾಗಿರುವ ಅವನ ಮಗ ಜೆಕರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಮೂಡಣ ದಿಕ್ಕಿನ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತು. ಬಹು ವಿವೇಕವುಳ್ಳ ಪಂಚಾಯತನಾಗಿರುವ ಅವನ ಮಗನಾದ ಜೆಕರ್ಯನ ಹೆಸರಿಗೆ ಬಡಗಣ ದಿಕ್ಕಿನ ಚೀಟು ಬಿದ್ದಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಶೆಲೆಮ್ಯನಿಗೆ ಪೂರ್ವದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು; ಅವನ ಮಗನಾದ ಜೆಕರ್ಯನಿಗೆ ಉತ್ತರ ದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನು ಒಳ್ಳೆಯ ಸಲಹೆಗಾರನಾಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಪೂರ್ವದಿಕ್ಕಿನ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗ ಬುದ್ಧಿಯುಳ್ಳ ಆಲೋಚನೆಯವನಾಗಿರುವ ಜೆಕರ್ಯನಿಗೋಸ್ಕರ ಹಾಕಿದ ಚೀಟು ಉತ್ತರ ಭಾಗಕ್ಕೆ ಇತ್ತು. ಅಧ್ಯಾಯವನ್ನು ನೋಡಿ |