Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 26:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವರು ಕನಿಷ್ಠ ಕುಟುಂಬವೆಂದೂ, ಶ್ರೇಷ್ಠ ಕುಟುಂಬವೆಂದೂ ವ್ಯತ್ಯಾಸ ಮಾಡದೆ ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವರು, ಕನಿಷ್ಠ ಕುಟುಂಬವೆಂದಾಗಲಿ ಶ್ರೇಷ್ಠ ಕುಟುಂಬವೆಂದಾಗಲಿ ವ್ಯತ್ಯಾಸಮಾಡದೆ, ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅವರು ಕನಿಷ್ಠ ಕುಟುಂಬವೆಂದೂ ಶ್ರೇಷ್ಠ ಕುಟುಂಬವೆಂದೂ ವ್ಯತ್ಯಾಸ ಮಾಡದೆ ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಪ್ರತಿಯೊಂದು ಕುಟುಂಬಕ್ಕೆ ಒಂದೊಂದು ದ್ವಾರದ ಜವಾಬ್ದಾರಿಕೆಯನ್ನು ಚೀಟುಹಾಕಿ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವರು ಕಿರಿಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಿಲಿಂದ ಬಾಗಿಲಿಗೂ ಚೀಟುಗಳನ್ನು ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 26:13
5 ತಿಳಿವುಗಳ ಹೋಲಿಕೆ  

ಇವರಲ್ಲಿ ಹಿರಿಯರು, ಕಿರಿಯರು, ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾ ಕ್ರಮವನ್ನು ಗೊತ್ತುಮಾಡಿಕೊಂಡರು.


ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ, ಕಿರಿಯರೂ ತಮ್ಮ ಕುಲ ಬಂಧುಗಳಾದ ಆರೋನ್ಯರಂತೆ ಅರಸನಾದ ದಾವೀದ ಚಾದೋಕ್ ಅಹೀಮೆಲೆಕ್ ಇವರ ಮುಂದೆಯೂ, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರ ಮುಂದೆಯೂ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.


ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳು, ದೈವಿಕ ಕಾರ್ಯಗಳ ಅಧ್ಯಕ್ಷರೂ ಇರುವುದರಿಂದ ಉಭಯ ಸಂತಾನದವರು ಸಮಾನ ಸ್ಥಾನದವರಾಗಿದ್ದರು.


ಈ ದ್ವಾರಪಾಲಕರ ವರ್ಗಗಳು ಪ್ರಧಾನಪುರುಷರು ತಮ್ಮ ಕುಲಬಂಧುಗಳಂತೆ ಯೆಹೋವನ ಆಲಯದಲ್ಲಿ ಸೇವೆಮಾಡುವವರಾಗಿದ್ದರು.


ಪೂರ್ವ ದಿಕ್ಕಿನ ಕಾವಲಿಗೆ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತು. ಬಹು ವಿವೇಕವುಳ್ಳ ಸಲಹೆಗಾರನಾಗಿರುವ ಅವನ ಮಗನಾದ ಜೆಕೆರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು