1 ಪೂರ್ವಕಾಲ ವೃತ್ತಾಂತ 23:26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ, ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲ ಎಂದು ದಾವೀದನು ಈ ಪ್ರಕಾರ ಆಜ್ಞೆ ವಿಧಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಲೇವಿಯರು ಇನ್ನು ಮುಂದೆ ಅವರ ಗುಡಾರವನ್ನೂ ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲವೆಂದುಕೊಂಡು, ದಾವೀದನು ಈ ಪ್ರಕಾರ ವಿಧಿಸಿದನು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ ಆರಾಧನಾ ಸಾಮಾಗ್ರಿಗಳನ್ನೂ ಹೊರುವದು ಅವಶ್ಯವಿಲ್ಲವೆಂದುಕೊಂಡು ದಾವೀದನು ಈ ಪ್ರಕಾರ ವಿಧಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆದ್ದರಿಂದ ಇನ್ನು ಮುಂದೆ ಲೇವಿಯರಿಗೆ ದೇವದರ್ಶನ ಗುಡಾರವನ್ನಾಗಲಿ ಅದರ ಸಾಮಾಗ್ರಿಗಳನ್ನಾಗಲಿ ಹೊರುವ ಅವಶ್ಯವಿಲ್ಲ” ಎಂದು ಹೇಳಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಲೇವಿಯರನ್ನು ಕುರಿತು ಅವರು ಗುಡಾರವನ್ನೂ, ಅವರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು. ಅಧ್ಯಾಯವನ್ನು ನೋಡಿ |
ಎಲ್ಲಾ ಇಸ್ರಾಯೇಲರನ್ನು ಉಪದೇಶಿಸತಕ್ಕವರೂ, ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಾಯೇಲ್ ರಾಜನೂ ಆದ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇರಿಸಿರಿ; ಅದನ್ನು ಹೆಗಲಿನ ಮೇಲೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ಅದು ನಿಮ್ಮ ಹೆಗಲುಗಳಿಗೆ ಹೊರೆಯಾಗಿರಬಾರದು; ಇನ್ನು ಮುಂದೆ ನಿಮ್ಮ ದೇವರಾದ ಯೆಹೋವನನ್ನೂ, ಆತನ ಪ್ರಜೆಗಳಾದ ಇಸ್ರಾಯೇಲರನ್ನೂ ಸೇವಿಸಿರಿ.