1 ಪೂರ್ವಕಾಲ ವೃತ್ತಾಂತ 22:9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ನಿನಗೆ ಒಬ್ಬ ಮಗನು ಹುಟ್ಟುವನು, ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಡಗಿಸಿ, ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಾಯೇಲರಿಗೆ ಸಮಾಧಾನವನ್ನೂ ಮತ್ತು ಸೌಭಾಗ್ಯವನ್ನೂ ದಯಪಾಲಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ನಿನಗೆ ಒಬ್ಬ ಮಗ ಹುಟ್ಟುವನು; ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲ ವಿರೋಧಿಗಳನ್ನು ಅಡಗಿಸಿ ಅವನಿಗೆ ಶಾಂತಿ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನ ಎಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಯೇಲರಿಗೆ ಶಾಂತಿಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ನಿನಗೆ ಒಬ್ಬ ಮಗನು ಹುಟ್ಟುವನು; ಅವನು ಸಮಾಧಾನಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಣಗಿಸಿ ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವದು. ಅವನ ಕಾಲದಲ್ಲಿ ಇಸ್ರಾಯೇಲ್ಯರಿಗೆ ಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆದರೆ ನಿನ್ನ ನಂತರ ಬರುವ ನಿನ್ನ ಮಗನು ಸಮಾಧಾನ ಪುರುಷನಾಗಿರುವನು. ಅವನ ರಾಜ್ಯದಲ್ಲಿ ನಾನು ಶಾಂತಿಯನ್ನು ನೆಲೆಗೊಳಿಸುವೆನು. ಅವನ ಸುತ್ತಮುತ್ತಲಿರುವ ವೈರಿಗಳಿಂದ ಅವನಿಗೆ ಯಾವ ಕೇಡೂ ಉಂಟಾಗದು. ಅವನೇ ಸೊಲೊಮೋನನು. ಅವನ ಕಾಲದಲ್ಲಿ ಇಸ್ರೇಲರು ಸಮಾಧಾನದಿಂದ ವಾಸಿಸುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಶಾಂತಿ ಸಮಾಧಾನದ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು. ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ವಿಶ್ರಾಂತಿಯನ್ನು ಕೊಡುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಶಾಂತಿ ಸಮಾಧಾನವನ್ನೂ ಕೊಡುವೆನು. ಅಧ್ಯಾಯವನ್ನು ನೋಡಿ |