Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 2:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅಬೀಗೈಲಳು ಅಮಾಸನ ತಾಯಿ. ಇಷ್ಮಾಯೇಲನಾದ ಯೆತೆರ್ ಎಂಬವನು ಅವನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅವನ ಇನ್ನೊಬ್ಬ ಮಗಳು ಅಬೀಗೈಲಳು ಇಷ್ಮಾಯೇಲನ ವಂಶಜ ಯೆತೆರ್ ಎಂಬವನನ್ನು ವಿವಾಹವಾಗಿ ಅಮಾಸ ಎಂಬ ಮಗನನ್ನು ಪಡೆದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಅಬೀಗೈಲಳು ಅಮಾಸನ ತಾಯಿ; ಇಷ್ಮಾಯೇಲ್ಯನಾದ ಯೆತೆರ್ ಎಂಬವನು ಅವನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅಬೀಗೈಲಳು ಅಮಾಸನ ತಾಯಿ. ಅಮಾಸನ ತಂದೆ ಯೆತೆರ್, ಇವನು ಇಷ್ಮಾಯೇಲ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅಬೀಗೈಲಳು ಅಮಾಸನ ತಾಯಿ, ಅಮಾಸನ ತಂದೆಯು ಇಷ್ಮಾಯೇಲನ ವಂಶದ ಯೆತೆರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 2:17
8 ತಿಳಿವುಗಳ ಹೋಲಿಕೆ  

ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇಸ್ರಾಯೇಲನಾದ ಇತ್ರನು, ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗೈಲ್ ಎಂಬುವಳನ್ನು ಸಂಗಮಿಸಿದ್ದರಿಂದ ಈ ಅಮಾಸನು ಹುಟ್ಟಿದನು.


ಯೆಹೋವನು ಈ ರಕ್ತಾಪರಾಧವನ್ನು ಅವನ ತಲೆ ಮೇಲೆಯೇ ಬರಮಾಡಲಿ. ಅವನು ನನ್ನ ತಂದೆಯಾದ ದಾವೀದನಿಗೆ ತಿಳಿಯದೇ ತನಗಿಂತ ಉತ್ತಮರೂ ಮತ್ತು ನೀತಿವಂತರೂ ಆದ ಇಬ್ಬರು ಮನುಷ್ಯರನ್ನು ಎಂದರೆ ಇಸ್ರಾಯೇಲ್ ಸೇನಾಧಿಪತಿಯೂ, ನೇರನ ಮಗನೂ ಆದ ಅಬ್ನೇರನನ್ನೂ, ಯೆಹೂದ ಸೇನಾಧಿಪತಿಯೂ ಯೆತೆರನ ಮಗನೂ ಆದ ಅಮಾಸನನ್ನೂ ಕತ್ತಿಯಿಂದ ಕೊಂದನಲ್ಲಾ.


ಚೆರೂಯಳ ಮಗನಾದ ಯೋವಾಬನು ನನಗೆ ಮಾಡಿರುವುದನ್ನು ಬಲ್ಲೆಯಲ್ಲಾ ಅವನು ಇಬ್ಬರು ಇಸ್ರಾಯೇಲರ ಸೇನಾಧಿಪತಿಗಳಾದ ನೇರನ ಮಗನಾದ ಅಬ್ನೇರನನ್ನೂ ಮತ್ತು ಯೆತೆರನ ಮಗನಾದ ಅಮಾಸನನ್ನೂ ಕೊಂದುಹಾಕಿದನು. ಯುದ್ಧ ಕಾಲದಲ್ಲಿಯೋ ಎಂಬಂತೆ ಸಮಾಧಾನ ಕಾಲದಲ್ಲಿಯೂ ರಕ್ತಸುರಿಸಿ ಅದನ್ನು ತನ್ನ ನಡುಕಟ್ಟಿಗೂ ಪಾದರಕ್ಷೆಗಳಿಗೂ ಹಚ್ಚಿಕೊಂಡನು.


ಅಮಾಸನಿಗೆ, ‘ನೀನು ನನಗೆ ರಕ್ತಸಂಬಂಧಿಯಾಗಿದ್ದೀ. ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯ ಸೇನಾಧಿಪತಿಯನ್ನಾಗಿ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ’ ಎಂಬುದಾಗಿಯೂ ತಿಳಿಸಿರಿ” ಎಂದು ಹೇಳಿ ಕಳುಹಿಸಿದನು.


ಚೆರೂಯ ಮತ್ತು ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ ಮತ್ತು ಅಸಾಹೇಲ್ ಎಂಬವರು ಚೆರೂಯಳ ಮಕ್ಕಳು.


ಹೆಚ್ರೋನನ ಮಗ ಕಾಲೇಬ. ಇವನು ತನ್ನ ಹೆಂಡತಿ ಅಜೂಬಳಿಂದಲೂ ಮತ್ತು ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಆಕೆಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯೇಷೆರ್, ಶೋಬಾಬ್ ಮತ್ತು ಅರ್ದೋನ್ ಎಂಬವರು.


ಆಗ ಮೂವತ್ತು ಜನರಲ್ಲಿ ಮುಖ್ಯಸ್ಥನಾದ ಅಮಾಸೈಯು ಆತ್ಮಾವೇಶವುಳ್ಳವನಾಗಿ, “ದಾವೀದನೇ, ನಾವು ನಿನ್ನವರು; ಶುಭವಾಗಲಿ! ಇಷಯನ ಮಗನೇ, ನಾವು ನಿನ್ನ ಪಕ್ಷದವರು; ಶುಭವಾಗಲಿ! ನಿನಗೂ ನಿನ್ನ ಸಹಾಯಕರಿಗೂ ಶುಭವಾಗಲಿ! ನಿನ್ನ ದೇವರು ನಿನಗೆ ಜಯವನ್ನು ಕೊಡುವವನಾಗಿದ್ದಾನೆ” ಎಂದು ಹೇಳಿದನು. ಆಗ ದಾವೀದನು ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡು ಸೈನ್ಯಾಧಿಪತಿಗಳನ್ನಾಗಿ ನೇಮಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು