Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 16:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಯೆಹೋವನ ಮಂಜೂಷದ ಮುಂದೆ ದೇವರಾಧನೆ ನಡಿಸುವುದಕ್ಕೋಸ್ಕರ ದಾವೀದನು ಕೆಲವು ಲೇವಿಯರನ್ನು ನೇಮಿಸಿದನು. ಇಸ್ರಾಯೇಲಿನ ದೇವರಾದ ಯೆಹೋವನನ್ನು ಸ್ತುತಿಸುವುದೂ, ಹಾಡಿ ಹರಸುವುದೂ ಅವರ ಕರ್ತವ್ಯವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಸರ್ವೇಶ್ವರನ ಮಂಜೂಷದ ಮುಂದೆ ದೇವರ ಆರಾಧನೆ ಮಾಡುವುದಕ್ಕಾಗಿ ದಾವೀದನು ಕೆಲವು ಮಂದಿ ಲೇವಿಯರನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಯೆಹೋವನ ಮಂಜೂಷದ ಮುಂದೆ ದೇವಾರಾಧನೆ ನಡಿಸುವದಕ್ಕೋಸ್ಕರ ದಾವೀದನು ಕೆಲವು ಮಂದಿ ಲೇವಿಯರನ್ನು ನೇವಿುಸಿದನು. ಇಸ್ರಾಯೇಲ್‍ದೇವರಾದ ಯೆಹೋವನನ್ನು ಸ್ತುತಿಸುವದೂ ಹಾಡಿ ಹರಸುವದೂ ಅವರ ಕರ್ತವ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ದಾವೀದನು ಕೆಲವು ಮಂದಿ ಯಾಜಕರನ್ನು ಒಡಂಬಡಿಕೆಯ ಪೆಟ್ಟಿಗೆಯ ಸೇವೆಮಾಡುವುದಕ್ಕಾಗಿ ನೇಮಿಸಿದನು. ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಆತನನ್ನು ಕೊಂಡಾಡುವುದೇ ಇವರ ಕೆಲಸವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 16:4
25 ತಿಳಿವುಗಳ ಹೋಲಿಕೆ  

ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!


ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು,


ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.


ಮಹತ್ಕಾರ್ಯಗಳನ್ನು ನಡೆಸುವುದರಲ್ಲಿ ಅದ್ವಿತೀಯನೂ, ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವು.


ದೇವರೇ, ದಯವಿಟ್ಟು ನನ್ನನ್ನು ರಕ್ಷಿಸು. ಯೆಹೋವನೇ, ಬೇಗನೆ ಬಂದು ಸಹಾಯ ಮಾಡು.


ಕೆಟ್ಟ ನಡತೆಯುಳ್ಳವರನ್ನು ನೋಡಿ ತಳಮಳಗೊಳ್ಳಬೇಡ; ದುರಾಚಾರಿಗಳನ್ನು ನೋಡಿ ಅಸೂಯೆಪಡಬೇಡ.


ದಾವೀದನು ಎಲ್ಲಾಜಾರನ ಸಂತಾನದವನಾದ ಚಾದೋಕನೂ, ಈತಾಮಾರನ ಸಂತಾನದವನಾದ ಅಹೀಮೆಲೆಕನು ಯಾಜಕರನ್ನು ಸರದಿಯ ಮೇಲೆ ಸೇವೆಮಾಡತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು.


“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನ ನಾಮದ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಆತನ ಸತ್ಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.


ಆಗ ದಾವೀದನು ಲೇವಿಯರ ಪ್ರಧಾನರಿಗೆ, “ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ, ಕಿನ್ನರಿ, ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿ ಮಾಡುವುದಕ್ಕಾಗಿ ನೇಮಿಸಿರಿ” ಎಂದು ಆಜ್ಞಾಪಿಸಿದನು.


“ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದಿದ್ದನ್ನು ಆತನ ಹಸ್ತವು ಈಗ ನೆರವೇರಿಸಿದೆ.


ಅಲ್ಲಿ ಯಾಕೋಬನು ಯೆಹೋವನ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ “ಏಲ್ ಎಲೋಹೆ ಇಸ್ರಾಯೇಲ್” ಎಂದು ಹೆಸರಿಟ್ಟನು.


ಅವನು ಯಾಕೋಬನಿಗೆ, “ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಲ್ಪಡುವುದಿಲ್ಲ; ನೀನು ದೇವರ ಸಂಗಡಲೂ, ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದುದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರಾಗುವುದು” ಎಂದು ಹೇಳಿದನು.


ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.


ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.


ಹಾಗೂ ಅವರಲ್ಲಿ ಪ್ರತಿಯೊಬ್ಬ ಪುರುಷ ಹಾಗು ಸ್ತ್ರೀಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಬೇಯಿಸಿದ ಮಾಂಸವನ್ನೂ ಮತ್ತು ದ್ರಾಕ್ಷಿಹಣ್ಣಿನ ಒಂದು ಗೊಂಚಲನ್ನೂ ಕೊಡಿಸಿದನು.


ಅವರಲ್ಲಿ ಆಸಾಫನು ಪ್ರಧಾನನು. ಜೆಕರ್ಯನು ಎರಡನೆಯವನು. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್, ಯೆಗೀಯೇಲ್ ಇವರು ಸ್ವರಮಂಡಲ, ಕಿನ್ನರಿ ಮೊದಲಾದ ವಾದ್ಯಗಳನ್ನು ನುಡಿಸುವವರು, ಆಸಾಫನು ಕೈತಾಳ ಹಾಕುವುದಕ್ಕೆ ನೇಮಿಸಲಾಯಿತು.


ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,


ಮಂಜೂಷವನ್ನು ಒಳಗಿಟ್ಟ ಯಾಜಕರು ದೇವಾಲಯದಿಂದ ಹೊರಗೆ ಬಂದಕೂಡಲೆ ಏಕ ಸ್ವರದಿಂದ ಸ್ವರವೆತ್ತಿ ಯೆಹೋವನನ್ನು ಕೀರ್ತಿಸುವುದಕ್ಕಾಗಿ ತುತ್ತೂರಿ ಊದುವವರೂ ಗಾಯನ ಮಾಡುವವರೂ ಅಲ್ಲಿ ನಿಂತಿದ್ದರು. ತುತ್ತೂರಿ, ತಾಳ ಮೊದಲಾದ ವಾದ್ಯಗಳ ಧ್ವನಿಯೊಡನೆ ಹೀಗೆ ಹಾಡಿದರು, “ಯೆಹೋವನು ಒಳ್ಳೆಯವನು, ಆತನ ಕೃಪೆಯು ಶಾಶ್ವತವಾಗಿರುವುದು” ಎಂದು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವವರ ಸ್ವರವೂ ಕೇಳಿಸಿದೊಡನೆ, ಮೇಘವು ಯೆಹೋವನ ಆಲಯದಲ್ಲಿ ತುಂಬಿಕೊಂಡಿತು.


ಕಟ್ಟುವವರು ಯೆಹೋವನ ಮಂದಿರದ ಅಸ್ತಿವಾರವನ್ನು ಹಾಕಿದಾಗ ಇಸ್ರಾಯೇಲರ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ಯೆಹೋವನನ್ನು ಸ್ತುತಿಸಿ ಕೀರ್ತಿಸುವುದಕ್ಕೋಸ್ಕರ ಯಾಜಕರು ತಮ್ಮ ದೀಕ್ಷಾವಸ್ತ್ರಗಳಿಂದ ಭೂಷಿತರಾಗಿ ತುತ್ತೂರಿಗಳೊಡನೆಯೂ, ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆಯೂ ನಿಂತುಕೊಂಡರು.


ಈ ಲೇವಿಯರ ಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಅದ ಯೋಯಾಕೀಮ್, ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನಾದ ಎಜ್ರ ಇವರ ಕಾಲದಲ್ಲಿದ್ದವರು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು