Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 14:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಷ್ಟರಲ್ಲಿ ಬಾಳ್ ಪೆರಾಚೀಮಿಗೆ ಬಂದ ಅವರನ್ನು ದಾವೀದನು ಸೋಲಿಸಿ, “ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ಹೇಳಿದ್ದರಿಂದ ಆ ಯುದ್ಧ ಸ್ಥಳಕ್ಕೆ ಬಾಳ್ ಪೆರಾಚೀಮ್ ಎಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಹೀಗೆ ದಾವೀದ ಬಾಳ್ ಪೆರಾಚೀಮ್ ಎಂಬಲ್ಲಿ ಅವರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನುಗ್ಗಿ, ವೈರಿಸೈನ್ಯವನ್ನು ನಾಶಮಾಡಲು ಸರ್ವೇಶ್ವರ ನನ್ನನ್ನು ಉಪಯೋಗಿಸಿದ್ದಾರೆ,” ಎಂದು ಹೇಳಿದನು. ಈ ಕಾರಣ ಆ ಸ್ಥಳಕ್ಕೆ ‘ಬಾಳ್ ಪೆರಾಚೀಮ್’ ಎಂಬ ಹೆಸರು ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅಷ್ಟರಲ್ಲಿ ಬಾಳ್‍ಪೆರಾಚೀವಿುಗೆ ಬಂದ ಅವರನ್ನು ದಾವೀದನು ಸೋಲಿಸಿ - ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆಂದು ಹೇಳಿದ್ದರಿಂದ ಆ ಯುದ್ಧಸ್ಥಳಕ್ಕೆ ಬಾಳ್‍ಪೆರಾಚೀಮೆಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆಗ ದಾವೀದನೂ ಅವನ ಸಂಗಡಿಗರೂ ಬಾಳ್ ಪೆರಾಚೀಮ್ ಎಂಬ ಸ್ಥಳದವರೆಗೆ ಹೋಗಿ ಫಿಲಿಷ್ಟಿಯರನ್ನು ನಾಶಮಾಡಿದನು. “ದೇವರು ಕಟ್ಟೆಯೊಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ದಾಳಿಮಾಡಿ ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ದಾವೀದನು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಬಾಳ್‌ಪೆರಾಚೀಮ್ ಎಂದು ಹೆಸರಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಹಾಗೆಯೇ ದಾವೀದನು ಮತ್ತು ಅವನ ಸಂಗಡಿಗರೂ ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ದೇವರು ನನ್ನ ಕೈಯಿಂದ ನನ್ನ ಶತ್ರುಗಳನ್ನು ನಾಶಮಾಡಿದ್ದಾರೆ,” ಎಂದನು. ಆದಕಾರಣ ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 14:11
11 ತಿಳಿವುಗಳ ಹೋಲಿಕೆ  

ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡೆಸಬೇಕೆಂತಲೂ, ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ ಪೆರಾಚೀಮ್ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್ ಕಣಿವೆಯಲ್ಲಿ ರೋಷಗೊಂಡಂತೆ ರೋಷಗೊಳ್ಳುವನು.


ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.


ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಆ ಮನೆ ಸಂಪೂರ್ಣವಾಗಿ ಕುಸಿದುಬಿತ್ತು. ಆ ಕುಸಿತ ಅಗಾಧವಾದುದು.


ಅರಸುಗಳಿಗೆ ಜಯಪ್ರದನೂ, ಸೇವಕನಾದ ದಾವೀದನನ್ನು ಹಾನಿಕರವಾದ ಕತ್ತಿಗೆ ತಪ್ಪಿಸಿದವನೂ ನೀನೇ.


ಕೋಟೆ ಬಿರುಕುಗಳಲ್ಲಿ ನುಗ್ಗಿ, ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ.


ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.


ನನ್ನ ಶರಣನಾದ ಯೆಹೋವನಿಗೆ ಕೊಂಡಾಟವಾಗಲಿ. ಆತನು ನನ್ನ ಕೈಗಳಿಗೆ ಯುದ್ಧವಿದ್ಯೆಯನ್ನು, ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ.


ನಮ್ಮ ಪೂರ್ವಿಕರಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; ನಿನ್ನ ಭುಜಬಲ, ಬಲಗೈ ಮತ್ತು ಪ್ರಸನ್ನತೆ ಅವರಿಗೆ ಜಯವನ್ನು ಉಂಟುಮಾಡಿದವು; ನಿನ್ನ ಸಹಾಯ ಸದಾಕಾಲ ಅವರಿಗಿತ್ತಲ್ಲಾ.


ದಾವೀದನು ದೇವರಾದ ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಅವರನ್ನು ನಿನ್ನ ಕೈಗೆ ಒಪ್ಪಿಸುವೆನು” ಎಂದು ಉತ್ತರ ಕೊಟ್ಟನು.


ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ದೇವರುಗಳನ್ನು ಸುಟ್ಟುಬಿಡುವಂತೆ ದಾವೀದನು ಅಪ್ಪಣೆ ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು