1 ಪೂರ್ವಕಾಲ ವೃತ್ತಾಂತ 12:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಅವನು ಹಿಂತಿರುಗಿ ಚಿಕ್ಲಗಿಗೆ ಹೋಗುವಾಗ ಮನಸ್ಸೆ ಕುಲದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹು ಮತ್ತು ಚಿಲ್ಲೆತೈ ಎಂಬುವರು ಬಂದು ಅವನೊಂದಿಗೆ ಸೇರಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಹೀಗೆ ಅವನು ಹಿಂದಿರುಗುತ್ತಿದ್ದಾಗ ಅವನನ್ನು ಸೇರಿಕೊಂಡ ಮನಸ್ಸೆಗೋತ್ರದ ಸೈನಿಕರ ಹೆಸರುಗಳು ಇಂತಿವೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಹಾಗೂ ಚಿಲ್ಲೆತೈ. ಇವರೆಲ್ಲರೂ ಮನಸ್ಸೆ ಗೋತ್ರದಲ್ಲಿ ಸಹಸ್ರಾಧಿಪತಿಗಳಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಅವನು ಹಿಂದಿರುಗಿ ಚಿಕ್ಲಗಿಗೆ ಹೋಗುವಾಗ ಮನಸ್ಸೆಕುಲದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ದಾವೀದನು ಚಿಕ್ಲಗಿನಲ್ಲಿ ವಾಸವಾಗಿದ್ದಾಗ ಅವನೊಂದಿಗೆ ಸೇರಿದ ಮನಸ್ಸೆಕುಲದವರು ಯಾರೆಂದರೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಮತ್ತು ಚಿಲ್ಲತೈ. ಇವರೆಲ್ಲರೂ ಮನಸ್ಸೆಕುಲದ ಮುಖ್ಯಾಧಿಕಾರಿಗಳಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ದಾವೀದನು ಹಿಂದಿರುಗಿ ಚಿಕ್ಲಗಿಗೆ ಹಿಂದಿರುಗುತ್ತಿದ್ದಾಗ ಅವನೊಂದಿಗೆ ಮನಸ್ಸೆ ಗೋತ್ರದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹು, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು. ಅಧ್ಯಾಯವನ್ನು ನೋಡಿ |
ಸೌಲನಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗುವ ಫಿಲಿಷ್ಟಿಯರ ಜೊತೆಯಲ್ಲಿ ದಾವೀದನೂ ಹೋಗುತ್ತಿರುವಾಗ ಕೆಲವು ಜನ ಮನಸ್ಸೆಯವರು ಬಂದು ಅವನೊಡನೆ ಸೇರಿಕೊಂಡರು. ದಾವೀದನು ನಿಜವಾಗಿ ಫಿಲಿಷ್ಟಿಯರಿಗೆ ಸಹಾಯಕನು ಆಗಿರಲಾರನೆಂದು, ಅವರ ಪ್ರಭುಗಳು, “ಇವನು ನಮ್ಮ ತಲೆಗಳನ್ನು ಕಡಿದು ತಿರುಗಿ ತನ್ನ ಯಜಮಾನನಾದ ಸೌಲನೊಂದಿಗೆ ಸೇರಿಕೊಂಡಾನು” ಎಂಬುದಾಗಿ ಆಲೋಚಿಸಿ ಅವನನ್ನು ಹಿಂದಕ್ಕೆ ಕಳುಹಿಸಿದರು.