Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಯೊರ್ದನ್ ನದಿಯು ಮೊದಲನೆಯ ತಿಂಗಳಿನಲ್ಲಿ ದಡ ತುಂಬಿ ಹರಿಯುತ್ತಿರುವಾಗ, ಇವರು ಅದನ್ನು ದಾಟಿ ನದಿಯ ತಗ್ಗಿನ ಪೂರ್ವ ಮತ್ತು ಪಶ್ಚಿಮ ಪ್ರದೇಶದಲ್ಲಿರವ ಎಲ್ಲರನ್ನೂ ಓಡಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಜೋರ್ಡನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತ ಇದ್ದಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವಪಶ್ಚಿಮ ಪ್ರದೇಶದಲ್ಲಿದ್ದವರೆಲ್ಲರನ್ನು ಓಡಿಸಿಬಿಟ್ಟವರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಯೊರ್ದನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತಿರುವಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವ ಪಶ್ಚಿಮ ಪ್ರದೇಶಗಳವರೆಲ್ಲರನ್ನೂ ಓಡಿಸಿಬಿಟ್ಟವರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಜೋರ್ಡನ್ ನದಿಯು ದಡಮೀರಿ ಹರಿಯುತ್ತಿರುವಾಗ ಗಾದ್ ಕುಲದವರು ಅದನ್ನು ದಾಟಿ ಆಚೆಪ್ರದೇಶದಲ್ಲಿ ವಾಸವಾಗಿದ್ದ ಜನರನ್ನೆಲ್ಲಾ ಪೂರ್ವಕ್ಕೂ ಪಶ್ಚಿಮಕ್ಕೂ ಓಡಿಸಿ ಅವರ ಸ್ಥಳವನ್ನು ಆಕ್ರಮಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಇವರು ಮೊದಲನೆಯ ತಿಂಗಳಲ್ಲಿ ಯೊರ್ದನ್ ಹೊಳೆ ದಡಮೀರಿ ಹರಿಯುತ್ತಿದ್ದಾಗ, ಅದನ್ನು ದಾಟಿ ಪೂರ್ವ ಕಡೆಯಲ್ಲಿಯೂ, ಪಶ್ಚಿಮ ಕಡೆಯಲ್ಲಿಯೂ ತಗ್ಗುಗಳಲ್ಲಿ ಇರುವವರೆಲ್ಲರನ್ನು ಓಡಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:15
5 ತಿಳಿವುಗಳ ಹೋಲಿಕೆ  

ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು.


ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೇ ನೀರು ಮೊದಲಿನಂತೆ ಬಂದು, ಯೊರ್ದನ್ ನದಿಯು ದಡಮೀರಿ ಹರಿಯಿತು.


ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟ ಅಡವಿಯಿಂದ ಎದೋಮ್ಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲರು?


ಇಂತೆನ್ನುವ ಯೆಹೋವನು ನನಗೆ, “ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂದಿಗೆ ಓಡಿ ಹೇಗೆ ಮುಂದಾಗುವಿ? ಅಪಾಯವಿಲ್ಲದ ದೇಶದಲ್ಲಿ ನೀನು ನಿರ್ಭಯವಾಗಿದ್ದರೂ ಯೊರ್ದನಿನ ದಟ್ಟಡವಿಯಲ್ಲಿ ಏನು ಮಾಡುವಿ?


ಬೆನ್ಯಾಮೀನ್ ಮತ್ತು ಯೂದ ಕುಲದವರಲ್ಲಿ ಕೆಲವರು ದಾವೀದನಿದ್ದ ದುರ್ಗದ ಬಳಿಗೆ ಬರಲು ದಾವೀದನು ಹೊರಗೆ ಹೋಗಿ ಅವರೆದುರಿಗೆ ನಿಂತು ಅವರಿಗೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು