Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಗಾದ್ಯರಾದ ಇವರು ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಕನಿಷ್ಠನಾದವನು ನೂರು ಜನರ ಮೇಲೆಯೂ, ಶ್ರೇಷ್ಠನಾದವನು ಸಾವಿರ ಜನರ ಮೇಲೆಯೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಗಾದ್ ಗೋತ್ರದ ಈ ಕೆಲವು ಪುರುಷರು ಹಿರಿಯ ಸಹಸ್ರಾಧಿಪತಿಗಳೂ ಕಿರಿಯ ಶತಾಧಿಪತಿಗಳೂ ಆಗಿದ್ದರು .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಗಾದ್ಯರಾದ ಇವರು ಸೈನ್ಯಾಧಿಪತಿಗಳಾಗಿದ್ದರು; ಇವರಲ್ಲಿ ಕನಿಷ್ಠನಾದವನು ನೂರು ಮಂದಿಗೆ ಸಮನು; ಶ್ರೇಷ್ಠ ನಾದವನು ಸಾವಿರ ಮಂದಿಗೆ ಸಮಬಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಇವರೆಲ್ಲಾ ಗಾದ್ಯರ ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಅತಿಬಲಹೀನನಾದವನು ನೂರು ಮಂದಿ ವೈರಿಗಳೊಂದಿಗೆ ಕಾದಾಡಲು ಶಕ್ತನಾಗಿದ್ದನು. ಅವರಲ್ಲಿ ಎಲ್ಲರಿಗಿಂತ ಪರಾಕ್ರಮಿಯು ಒಂದು ಸಾವಿರ ವೈರಿಗಳೊಂದಿಗೆ ಕಾದಾಡಲು ಶಕ್ತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಗಾದನ ಪುತ್ರರಾದ ಇವರು ಸೈನ್ಯದಲ್ಲಿ ಅಧಿಪತಿಗಳಾಗಿದ್ದರು. ಕಿರಿಯನು ನೂರು ಮಂದಿಯ ಮೇಲೆಯೂ ಹಿರಿಯನು ಸಾವಿರ ಮಂದಿಯ ಮೇಲೆಯೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:14
3 ತಿಳಿವುಗಳ ಹೋಲಿಕೆ  

ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು? ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು?


ನಿಮ್ಮಲ್ಲಿ ಐದು ಜನರು ನೂರು ಜನರನ್ನೂ ಮತ್ತು ನೂರು ಜನರು ಹತ್ತು ಸಾವಿರ ಜನರನ್ನೂ ಓಡಿಸುವರು; ನಿಮ್ಮ ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.


ಹತ್ತನೆಯವನು ಯೆರೆಮೀಯನು, ಹನ್ನೊಂದನೆಯವನು ಮಕ್ಬನ್ನೈ ಇವರೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು