1 ಪೂರ್ವಕಾಲ ವೃತ್ತಾಂತ 1:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಏಬೆರನಿಗೆ ಇಬ್ಬರು ಮಕ್ಕಳು - ಪೆಲೆಗ್ ಎಂಬವನು ಒಬ್ಬ. ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಯೊಕ್ತಾನ ಎಂಬವನು ಇನ್ನೊಬ್ಬ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ ಹೆಸರು; ಇವನ ಕಾಲದಲ್ಲಿ ಭೂವಿುಯ ಜನಗಳು ವಿಂಗಡವಾದವು. ಇವನ ತಮ್ಮನ ಹೆಸರು ಯೊಕ್ತಾನ್. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಏಬೆರನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಪೆಲೆಗ್. ಇವನ ಜೀವಮಾನಕಾಲದಲ್ಲಿ ಭೂಲೋಕದ ಜನರು ತಮ್ಮತಮ್ಮ ಭಾಷೆಗನುಸಾರವಾಗಿ ಗುಂಪುಗುಂಪಾಗಿ ಪ್ರತ್ಯೇಕವಾದರು. ಪೆಲೆಗನ ತಮ್ಮನ ಹೆಸರು ಯೊಕ್ತಾನ್. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು. ಒಬ್ಬನಿಗೆ ಪೆಲೆಗ್ ಎಂದು ಹೆಸರಿಡಲಾಯಿತು, ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಅವನ ತಮ್ಮನ ಹೆಸರು ಯೊಕ್ತಾನ್. ಅಧ್ಯಾಯವನ್ನು ನೋಡಿ |